ಶಿವಮೊಗ್ಗ: ಇಲ್ಲಿನ ಸುಬ್ಬಯ್ಯ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿ ವಿಷ್ಣುಪ್ರಿಯಾ (23) ಅವರ ಶವ ಹಾಸ್ಟೆಲ್‌ನ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಸೋಮವಾರ ಪತ್ತೆಯಾಗಿದೆ.
ವಿಷ್ಣುಪ್ರಿಯಾ ಮೂಲತಃ ಬಳ್ಳಾರಿಯವರು. ಅವರ ತಂದೆ ವೆಂಕಟೇಶ್ ಎಂಜಿನಿಯರ್ ಆಗಿದ್ದು, ಕುಟುಂಬ ಸಮೇತ ಬಹರೇನ್‌ನಲ್ಲಿ ವಾಸವಿದ್ದಾರೆ. ಎಂಬಿಬಿಎಸ್ ಕೋರ್ಸ್ ಪೂರ್ಣಗೊಳಿಸಿದ್ದ ವಿಷ್ಣುಪ್ರಿಯಾ ಇಂಟರ್ನ್‌ಶಿಪ್ ಮಾಡುತ್ತಿದ್ದರು. ಹಾಸ್ಟೆಲ್‌ನಲ್ಲಿ ಜೊತೆಗಿದ್ದ ಸ್ನೇಹಿತೆಯರು ಇಂಟರ್ನ್‌ಶಿಪ್ ಮುಗಿಸಿ ಊರಿಗೆ ಮರಳಿದ್ದು, ವಿಷ್ಣುಪ್ರಿಯಾ ಒಬ್ಬರೇ ಕೊಠಡಿಯಲ್ಲಿ ಇದ್ದರು ಎಂದು ತಿಳಿದುಬಂದಿದೆ.
‘ಸ್ಥಳದಲ್ಲಿ ಯಾವುದೇ ಡೆತ್‌ನೋಟ್ ಸಿಕ್ಕಿಲ್ಲ. ಮೇಲ್ನೋಟಕ್ಕೆ ಆತ್ಮಹತ್ಯೆಯಂತೆ ಕಾಣುತ್ತಿದೆ. ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿಕೊಂಡು ಪಾಲಕರಿಗೆ ವಿಷಯ ತಿಳಿಸಿದ್ದೇವೆ. ಅವರು ಬಂದು ದೂರು ನೀಡಿದ ನಂತರ ಮುಂದಿನ ಪ್ರಕ್ರಿಯೆ ಕೈಗೊಳ್ಳಲಿದ್ದೇವೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.