
ಪ್ರಜಾವಾಣಿ ವಾರ್ತೆ
ಆನವಟ್ಟಿ: ಸಮೀಪದ ಹಳ್ಳದ ಬೆಣ್ಣೆಗೇರಿ ಗ್ರಾಮದ ಬಸವರಾಜ್ ಪೇಟ್ಯಾರ್ ಅವರು 12 ಎಕರೆ ಹೋಲದಲ್ಲಿ ಬೆಳೆದಿದ್ದ ಮೆಕ್ಕಜೋಳವನ್ನು ಮುರಿದು ರಾಶಿ ಹಾಕಿದ್ದರು. ರಾತ್ರಿ ವೇಳೆ ಆಕಸ್ಮಿಕವಾಗಿ ಜೋಳದ ರಾಶಿಗೆ ಬೆಂಕಿ ತಗುಲಿ ಬೆಳೆ ನಷ್ಟವಾಗಿದೆ.
‘ಕೃಷಿಯನ್ನೇ ನಂಬಿ ಬದುಕು ಕಟ್ಟಿಕೊಂಡಿದ್ದೇವೆ. ಕಷ್ಟಪಟ್ಟು ಬೆಳೆದ ಬೆಳೆ ಕೈಸೇರುವ ಹೊತ್ತಿಗೆ ಬೆಂಕಿ ಬಿದ್ದು ಸುಟ್ಟು ಹೋಗಿದೆ. ಬೆಳೆ ಬೆಳೆಯಲು ಸಾಲ ಮಾಡಿಕೊಂಡಿದ್ದೇನೆ. ನಾಡ ಕಚೇರಿ, ಕೃಷಿ ಇಲಾಖೆ ಹಾಗೂ ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ. ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲಿಸಿ, ನಷ್ಟವಾದ ಬೆಳೆಗೆ ಪರಿಹಾರ ಕೂಡಿಸಬೇಕು’ ಎಂದು ಬಸವರಾಜ್ ಅವರು ಅಳಲು ತೋಡಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.