
ಭದ್ರಾವತಿ: ಶಾಸಕ ಬಿ.ಕೆ ಸಂಗಮೇಶ್ವರ್ ಅವರು ಎಲ್ಲ ಧರ್ಮದವರ ಆಧ್ಯಾತ್ಮಿಕ ಕಾರ್ಯಕ್ರಮಗಳಿಗೆ ಉದಾರ ಮನಸ್ಸಿನಿಂದ ಸಹಾಯಹಸ್ತ ಚಾಚುತ್ತಿದ್ದಾರೆ. ತಾಲ್ಲೂಕಿನ ದೇವಸ್ಥಾನಗಳಿಗೆ ಅಧಿಕ ದೇಣಿಗೆ ನೀಡಿದ್ದಾರೆ ಎಂದು ಹಿಂದೂ ಮಹಾಸಭಾ ಗಣಪತಿ ಸಮಿತಿಯ ಅಧ್ಯಕ್ಷ ವಿ.ಕದಿರೇಶ್ ತಿಳಿಸಿದರು.
ಹಿಂದೂ ಮಹಾಸಭಾ ಗಣಪತಿ ದೇವಸ್ಥಾನದ ಅಭಿವೃದ್ಧಿಗಾಗಿ ಶಾಸಕರ ನಿಧಿಯಿಂದ ದೇಣಿಗೆಯಾಗಿ ನೀಡಲಾದ ₹5 ಲಕ್ಷ ಮೊತ್ತದ ಚೆಕ್ಕನ್ನು ಭಾನುವಾರ ಸ್ವೀಕರಿಸಿ ಅವರು ಮಾತನಾಡಿದರು.
‘ಕ್ಷೇತ್ರದಲ್ಲಿ ದೇವಸ್ಥಾನಗಳ ಅಭಿವೃದ್ಧಿಗೆ ಈವರೆಗೂ ಇಷ್ಟೊಂದು ದೇಣಿಗೆಯನ್ನು ಬೇರಾವ ಶಾಸಕರೂ ನೀಡಿಲ್ಲ. ತಾಲ್ಲೂಕಿನ ಎಲ್ಲ ಸಮುದಾಯಗಳು, ಸಂಘ-ಸಂಸ್ಥೆಗಳು, ವಿವಿಧ ಜಾತ್ರಾ ಮಹೋತ್ಸವಗಳು, ಸಮುದಾಯ ಭವನಗಳ ನಿರ್ಮಾಣಕ್ಕೆ ಶಾಸಕರು ನೆರವು ನೀಡಿದ್ದಾರೆ’ ಎಂದರು.
ಅ.29ರಂದು ಜನ್ಮದಿನ ಆಚರಿಸಿಕೊಳ್ಳುತ್ತಿರುವ ಶಾಸಕರ ಹೆಸರಿನಲ್ಲಿ ಎಲ್ಲ ದೇವಸ್ಥಾನಗಳಲ್ಲಿಯೂ ಪೂಜೆ - ಅರ್ಚನೆ ಮಾಡಿಸಲಾಗುವುದು ಎಂದು ಹೇಳಿದರು.
ನಗರಸಭೆ ಸದಸ್ಯ ಬಿ.ಕೆ ಮೋಹನ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಎಸ್ ಗಣೇಶ್, ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾ ರಾಜ್‌ಕುಮಾರ್, ಉಪಾಧ್ಯಕ್ಷ ಎಂ.ಮಣಿ, ಹಿಂದೂ ಮಹಾಸಭಾ ಸಮಿತಿಯ ಗೌರವಾಧ್ಯಕ್ಷ ತಮ್ಮಣ್ಣ, ಉಪಾಧ್ಯಕ್ಷರಾದ ರಾಮಮೂರ್ತಿ, ಮಂಜುನಾಥ್, ಲಕ್ಷ್ಮಣ್, ಮಂಜಪ್ಪ, ಸುದೀಪ್ ಕುಮಾರ್, ನಾರಾಯಣಪ್ಪ, ಹೇಮಂತ್ ಕುಮಾರ್, ಪ್ರಧಾನ ಕಾರ್ಯದರ್ಶಿಗಳಾದ ಚೆನ್ನಪ್ಪ, ಸಾಗರ್, ಖಜಾಂಚಿ ಮಣಿ, ಕೆ.ಪಿ. ಗಿರಿ, ಗಿರಿ, ಡಿಎಸ್ಎಸ್‌ನ ವಿನೋದ್, ಲಕ್ಷ್ಮಿ, ನಾಗರತ್ನ, ಸೂರ್ಯಕಲಾ, ಶ್ರೀಲಕ್ಷ್ಮಿ, ಆಶಾ ಪುಟ್ಟಸ್ವಾಮಿ ಇತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.