ADVERTISEMENT

ಜ.3ಕ್ಕೆ ‘ಮುಳುಗಡೆಯ ಕತೆಗಳು’ ಕೃತಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 1 ಜನವರಿ 2026, 5:12 IST
Last Updated 1 ಜನವರಿ 2026, 5:12 IST
ನಾ.ಡಿಸೋಜ
ನಾ.ಡಿಸೋಜ   

ಸಾಗರ: ಸಾಹಿತಿ ನಾ.ಡಿಸೋಜ ಅವರ ಸ್ಮರಣಾರ್ಥವಾಗಿ ಜ.3ರಂದು ಮಧ್ಯಾಹ್ನ 4 ಕ್ಕೆ ನಗರದ ಗೋಪಾಲಕೃಷ್ಣ ದೇವಸ್ಥಾನದ ಸಭಾಂಗಣದಲ್ಲಿ ನವೀನ್ ಡಿಸೋಜ ಸಂಪಾದಿಸಿರುವ ನಾ.ಡಿಸೋಜರ ‘ಮುಳುಗಡೆಯ ಕತೆಗಳು’ ಕೃತಿ ಬಿಡುಗಡೆ ಸಮಾರಂಭ ನಡೆಯಲಿದೆ.

ಶಿಕಾರಿಪುರದ ಸುವ್ವಿ ಪಬ್ಲಿಕೇಷನ್ಸ್ ಪ್ರಕಟಿಸಿರುವ ಈ ಕೃತಿಯನ್ನು ಪರಿಸರ ಹೋರಾಟಗಾರ ಅಖಿಲೇಶ್ ಚಿಪ್ಪಳಿ ಬಿಡುಗಡೆ ಮಾಡಲಿದ್ದು, ಬರಹಗಾರ ಜಿ.ಟಿ.ಸತ್ಯನಾರಾಯಣ ಕರೂರು ಕೃತಿಯ ಕುರಿತು ಮಾತನಾಡಲಿದ್ದಾರೆ.

ಸಾಮಾಜಿಕ ಕಾರ್ಯಕರ್ತ ಶಿವಾನಂದ ಕುಗ್ವೆ, ರಂಗಕರ್ಮಿ ಬಿ.ಆರ್.ವಿಜಯವಾಮನ್, ಫಿಲೋಮಿನಾ ನಾ.ಡಿಸೋಜ, ಸುನಿಲ್ ಕುಮಾರ್ ಬಿ.ಎನ್. ಹಾಜರಿರುತ್ತಾರೆ. ನಾ.ಡಿಸೋಜ ಅವರ ಸಣ್ಣ ಕತೆ ಆಧರಿಸಿದ ‘ಸೆಲ್ವಿಯಾ ಎಂಬ ಹುಡುಗಿ’ ಕಿರುಚಿತ್ರದ ಪ್ರದರ್ಶನ ಏರ್ಪಡಿಸಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.