ADVERTISEMENT

ಶಿರಾಳಕೊಪ್ಪ: ಕೊಲೆ, ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2020, 3:43 IST
Last Updated 8 ಅಕ್ಟೋಬರ್ 2020, 3:43 IST

ಶಿರಾಳಕೊಪ್ಪ:ಕುಸ್ಕೂರು ಗ್ರಾಮದ ಕೆರೆಯಲ್ಲಿ ಈಚೆಗೆ ಸಿಕ್ಕಿದ್ದ ಅಪರಿಚಿತ ಶವ ಪತ್ತೆ ಸಂಬಂಧ ಕಾರ್ಯಾಚರಣೆ ನಡೆಸಿರುವ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಅಪರಿಚಿತ ಶವ ಗ್ರಾಮದ ರಮೇಶ್‌ (36) ಎಂಬುವವರದ್ದಾಗಿದ್ದು, ಅವರ ಕೊಲೆ ಸಂಬಂಧ ಮಂಜುಳಬಾಯಿ ಹಾಗೂ ಈಕೆಯ ಸಹಾಯಕ್ಕೆ ಬಂದಿದ್ದ ತುಕ್ಕರಾಜನನ್ನು ಬಂಧಿಸಿದ್ದಾರೆ.

‘ಮಂಜುಳಾಬಾಯಿ ಜೊತೆ ರಮೇಶ್‌ ಅಕ್ರಮ ಸಂಬಂಧ ಹೊಂದಿದ್ದು, ಇಬ್ಬರಲ್ಲಿ ವೈಮನಸ್ಸು ಉಂಟಾಗಿತ್ತು. ಇದರಿಂದ ಕೊಲೆ ಮಾಡಿ
ದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಎಎಸ್ಪಿ ಶ್ರೀನಿವಾಸಲು ಮಾರ್ಗದರ್ಶನದಲ್ಲಿ ಸಿಪಿಐ ಗುರುರಾಜ್ ಮೈಲಾರ್, ಸಬ್ ಇನ್‌ಸ್ಪೆಕ್ಟರ್ ರಮೇಶ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.