ADVERTISEMENT

ಭಾರತೀಯ ಸಂಸ್ಕೃತಿಯಲ್ಲಿ ಗೋವಿಗೆ ಪೂಜನೀಯ ಸ್ಥಾನ

ಗೋ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಕ್ಕಳ ತಜ್ಞ ಡಾ.ಧನಂಜಯ ಸರ್ಜಿ ಅನಿಸಿಕೆ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2021, 4:21 IST
Last Updated 7 ನವೆಂಬರ್ 2021, 4:21 IST
ಶಿವಮೊಗ್ಗದ ಕೋಟೆ ಸೀತಾರಾಮಾಂಜನೇಯ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ಗೋವುಗಳಿಗೆ ಪೂಜೆ ಸಲ್ಲಿಸಲಾಯಿತು (ಎಡಚಿತ್ರ). ಶಿವಮೊಗ್ಗದ ಜೈನ್ ಗೋಶಾಲೆಗೆ ಮಾಜಿ ಶಾಸಕ ಕೆ.ಬಿ. ಪ್ರಸನ್ನ ಕುಮಾರ್ ಅವರು ಪಕ್ಷದ ಕಾರ್ಯಕರ್ತರೊಂದಿಗೆ ಶುಕ್ರವಾರ ಭೇಟಿ ನೀಡಿ ಕರುವಿಗೆ ಪೂಜೆ ಸಲ್ಲಿಸಿದರು.
ಶಿವಮೊಗ್ಗದ ಕೋಟೆ ಸೀತಾರಾಮಾಂಜನೇಯ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ಗೋವುಗಳಿಗೆ ಪೂಜೆ ಸಲ್ಲಿಸಲಾಯಿತು (ಎಡಚಿತ್ರ). ಶಿವಮೊಗ್ಗದ ಜೈನ್ ಗೋಶಾಲೆಗೆ ಮಾಜಿ ಶಾಸಕ ಕೆ.ಬಿ. ಪ್ರಸನ್ನ ಕುಮಾರ್ ಅವರು ಪಕ್ಷದ ಕಾರ್ಯಕರ್ತರೊಂದಿಗೆ ಶುಕ್ರವಾರ ಭೇಟಿ ನೀಡಿ ಕರುವಿಗೆ ಪೂಜೆ ಸಲ್ಲಿಸಿದರು.   

ಶಿವಮೊಗ್ಗ: ಭಾರತೀಯ ಸಂಸ್ಕೃತಿಯಲ್ಲಿ ಗೋವಿಗೆ ಪೂಜ್ಯ ಸ್ಥಾನವಿದ್ದು, ಅನೇಕ ರೋಗಗಳಿಗೆ ಗೋವಿನ ಉತ್ಪನ್ನಗಳಿಂದ ತಯಾರಿಸಿದ ಔಷಧಗಳು ಪರಿಣಾಮ ಬೀರುವುದು ಪ್ರಾಚೀನ ಕಾಲದಿಂದಲೂ ಸಾಬೀತಾಗಿದೆ ಎಂದು ಮಕ್ಕಳ ತಜ್ಞ ಡಾ.ಧನಂಜಯ ಸರ್ಜಿ ಹೇಳಿದರು.

ನಗರದ ಕೋಟೆ ಸೀತಾರಾಮಾಂಜನೇಯ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ಗೋ ಪೂಜೆಯ ನಿಮಿತ್ತ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ವತಿಯಿಂದ ಹಮ್ಮಿಕೊಂಡಿದ್ದ ಗೋ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಗೋವಿನ ಹಾಲು, ಸಗಣಿ, ಮೂತ್ರದಿಂದ ಅನೇಕ ಔಷಧಗಳು ತಯಾರಾಗುತ್ತಿವೆ. ಆಯುರ್ವೇದದಲ್ಲಿ ಗೋವಿನ ಉತ್ಪನ್ನಗಳು ಪ್ರಮುಖ
ಪಾತ್ರ ವಹಿಸಿವೆ. ರಕ್ತದೊತ್ತಡ, ಸಕ್ಕರೆ ಕಾಯಿಲೆ, ಚರ್ಮರೋಗ, ಕ್ಯಾನ್ಸರ್, ಹೃದಯ ರೋಗಗಳ ನಿಯಂತ್ರಣದಲ್ಲಿ ಗೋ ಮೂತ್ರ ಪ್ರಮುಖ ಪಾತ್ರ ವಹಿಸುತ್ತದೆ. ಗೋವಿನ ಗೊಬ್ಬರದಿಂದಲೂ ಅನೇಕ ವಸ್ತುಗಳನ್ನು ತಯಾರಿಸುತ್ತಾರೆ. ಸಗಣಿ ಕೂಡ ಕ್ರಿಮಿನಾಶಕವಾಗಿ ಪರಿಣಾಮ ಬೀರುತ್ತದೆ ಎಂದು ತಿಳಿಸಿದರು.

ADVERTISEMENT

ದೇಶದಲ್ಲಿ ಪೂಜಿಸಲ್ಪಡುವ ಗೋವನ್ನು ಮಾಂಸಕ್ಕಾಗಿ ಹತ್ಯೆ ಮಾಡುತ್ತಿರುವುದು ವಿಷಾದದ ಸಂಗತಿ. 360 ಮಿಲಿಯನ್ ಮೆಟ್ರಿಕ್ ಟನ್ ಗೋ ಮಾಂಸವನ್ನು ನಾವು ರಫ್ತು ಮಾಡುತ್ತಿದ್ದೇವೆ. ಗೋ ಹತ್ಯೆಯನ್ನು ತಡೆಯುವ ಅವಶ್ಯಕತೆ ಇದ್ದು, ಇದರ ರಕ್ಷಣೆಗೆ ಎಲ್ಲರೂ ಮುಂದಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ನಮಿತಾ ಸರ್ಜಿ, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಅಧ್ಯಕ್ಷ ವಾಸುದೇವ್, ಕಾರ್ಯದರ್ಶಿ ನಾರಾಯಣ ವರ್ಣೇಕರ್, ಬಜರಂಗದಳ ಜಿಲ್ಲಾ ಸಂಚಾಲಕ ರಾಜೇಶ್ ಗೌಡ, ಕೋಶಾಧ್ಯಕ್ಷ ಕುಮಾರಸ್ವಾಮಿ, ನಗರ ಕಾರ್ಯದರ್ಶಿ ಸುಧಾಕರ್, ಅರವಿಂದ್, ಕಿರಣ್, ಗಣೇಶ್, ವಿಷ್ಣುಮೂರ್ತಿ, ರಾಜು, ಪಾಲಿಕೆ ಸದಸ್ಯ ಚನ್ನಬಸಪ್ಪ, ನಟರಾಜ್, ರಾಮಪ್ರಸಾದ್ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.