ADVERTISEMENT

ಜೀವಸಾರ್ಥಕತೆ ಪೋರ್ಟಲ್‍ನಲ್ಲಿ ನೇತ್ರದಾನಕ್ಕೆ ಅವಕಾಶ: ಡಾ.ಚಂದ್ರಶೇಖರ್ ಕಾಂಬ್ಳಿಮಠ್

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2021, 5:59 IST
Last Updated 3 ಡಿಸೆಂಬರ್ 2021, 5:59 IST
ಡಾ.ಚಂದ್ರಶೇಖರ್
ಡಾ.ಚಂದ್ರಶೇಖರ್   

ಚಿತ್ರದುರ್ಗ: ರಾಜ್ಯದಲ್ಲಿ ಅಂಗ ಕಸಿ ಕಾರ್ಯಕ್ರಮದ ಅಡಿ ನೇತ್ರದಾನ ಸೇರಿ ವಿವಿಧ ಅಂಗಾಂಗ ದಾನ ಮಾಡಲು ಇಚ್ಛಿಸುವವರು ಜೀವಸಾರ್ಥಕತೆಯ http://www.jeevasarthakathe.karnataka.gov.in ಪೋರ್ಟಲ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು.

ಈವರೆಗೆ ಜೀವಸಾರ್ಥಕತೆ ಪೋರ್ಟಲ್‍ನಲ್ಲಿ ಪಿತ್ತಜನಕಾಂಗ, ಮೂತ್ರಕೋಶ, ಹೃದಯ, ಮೇದೋಜೀರಕಗ್ರಂಥಿ, ಶ್ವಾಸಕೋಶ ಅಂಗಾಂಗ ದಾನ ಮಾಡಲು ಬಯಸುವವರು ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು. ಈಗ ನೇತ್ರದಾನಕ್ಕೂ ಅವಕಾಶ ನೀಡಲಾಗಿದೆ.

ನಿಧನ ಹೊಂದಿದ ದಾನಿಯ ಅಂಗ ಕಸಿಗೆ ಸಮನ್ವಯತೆ ಸಾಧಿಸುವುದು ಇದರ ಉದ್ದೇಶ. ಜತೆಗೆ ಸಾರ್ವಜನಿಕರನ್ನು ಅಂಗಾಂಗ ದಾನಕ್ಕಾಗಿ ಸುಶಿಕ್ಷಿತರನ್ನಾಗಿ ಮಾಡುವ ಧ್ಯೇಯೋದ್ದೇಶ ಹೊಂದಲಾಗಿದೆ ಎಂದು ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ.ಚಂದ್ರಶೇಖರ್ ಕಾಂಬ್ಳಿಮಠ್ ತಿಳಿಸಿದ್ದಾರೆ.

ADVERTISEMENT

ನೇತ್ರದಾನಕ್ಕೆ ಪೋರ್ಟಲ್‍ನಲ್ಲಿ ನೋಂದಾಯಿಸುವಾಗ ಹೆಸರು, ಮೂಲ ವಿವರ, ಭಾವಚಿತ್ರ ಮತ್ತು ಮೊಬೈಲ್ ಸಂಖ್ಯೆ ನಮೂದಿಸಬೇಕು. ನಂತರ ಒಟಿಪಿ ಬರಲಿದ್ದು, ಅದನ್ನು ನಮೂದಿಸಿ, ದಾನ ಮಾಡಲು ಇಚ್ಛಿಸುವ ಅಂಗಾಂಗದ ಮುಂಭಾಗ ಕಣ್ಣನ್ನು ಆಯ್ಕೆ ಮಾಡಬೇಕು. ನೋಂದಾಯಿಸಿದ ಮೊಬೈಲ್ ಸಂಖ್ಯೆಗೆ ದಾನಿಯ ಕಾರ್ಡ್ ಲಿಂಕ್ ಕಳುಹಿಸಲಾಗುವುದು. ನೇತ್ರದಾನ ನೋಂದಣಿ ಯಾವಾಗ, ಹೇಗೆ ಮಾಡಬೇಕು ಎಂಬ ವಿವರ ಕೂಡ ಪೋರ್ಟಲ್‌ನಲ್ಲಿ ವೀಕ್ಷಿಸಬಹುದು ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.