ಸಾಗರ: ತಾಲ್ಲೂಕಿನ ಹೊಸಗುಂದ ಗ್ರಾಮದಲ್ಲಿ ಚಿತ್ರಾನ್ನ ಹಾಗೂ ಚಹಾದಲ್ಲಿ ವಿಷ ಬೆರೆಸಿ ಇಂದಿರಮ್ಮ ಎಂಬುವವರನ್ನು ಕೊಲೆ ಮಾಡಲು ಪ್ರಯತ್ನ ನಡೆಸಲಾಗಿದೆ ಎಂದು ಆರೋಪಿಸಿ ಇಲ್ಲಿನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸೋಮವಾರ ದೂರು ದಾಖಲಾಗಿದೆ.
‘ಮನೆಯಲ್ಲಿ ಚಿತ್ರಾನ್ನ, ಚಹಾ ತಯಾರಿಸಿ ದೇವರಿಗೆ ಕೈಮುಗಿದು ಸ್ವಲ್ಪ ಹೊತ್ತಿನ ನಂತರ ಅಡುಗೆ ಮನೆಗೆ ಮರಳಿ, ಚಿತ್ರಾನ್ನ ಹಾಗೂ ಚಹಾ ಸೇವಿಸಿದ ತಕ್ಷಣ ಅಸ್ವಸ್ಥಗೊಂಡೆ.ಪುತ್ರಿಭದ್ರಮ್ಮ ಬಂದು ಪರಿಶೀಲಿಸಿದಾಗ ಚಿತ್ರಾನ್ನ ಹಾಗೂ ಚಹಾದಲ್ಲಿ ವಿಷ ಬೆರೆಸಿರುವುದು ಬೆಳಕಿಗೆ ಬಂದಿದೆ’ ಎಂದುಇಂದಿರಮ್ಮ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಇಂದಿರಮ್ಮ ಚೇತರಿಸಿಕೊಂಡಿದ್ದಾರೆ. ಗ್ರಾಮಾಂತರ ಠಾಣೆಗೆ ಪೊಲೀಸರು ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.