ADVERTISEMENT

ನಕಲಿ‌ ಔಷಧ ಮಾರಾಟ ಜಾಲ ಭೇದಿಸಿದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2021, 3:25 IST
Last Updated 5 ಅಕ್ಟೋಬರ್ 2021, 3:25 IST

ಶಿವಮೊಗ್ಗ: ವಾಲ್ಯು ಪ್ರಾಡಕ್ಟ್ ಕಂಪನಿಯ ಆಯುರ್ವೇದಿಕ್ ಔಷಧ ಅಮೃತ್ ನೋನಿ ಬ್ರಾಂಡ್ ಹೆಸರಿನಲ್ಲಿ ನಕಲಿ ಔಷಧ ಮಾರಾಟ ಮಾಡುತ್ತಿದ್ದ ಜಾಲವನ್ನು ಶಿವಮೊಗ್ಗ ದೊಡ್ಡಪೇಟೆ ಪೊಲೀಸರು ಭೇದಿಸಿದ್ದಾರೆ.

ಶಿವಮೊಗ್ಗ ಮಾರ್ನಮಿ ಬೈಲಿನ ಅಶೋಕ್ ಎಂಬುವವರಿಗೆ ಸೇರಿದ ಫಾರ್ಮಾದಲ್ಲಿದ್ದ 31 ನಕಲಿ ಅಮೃತ್ ನೋನಿ ಔಷಧ ಬಾಕ್ಸ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

31 ಬಾಕ್ಸ್‌ನಲ್ಲಿದ್ದ ಸುಮಾರು ₹ 7 ಲಕ್ಷ ಮೌಲ್ಯದ 1100 ಬಾಟಲಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ADVERTISEMENT

ಶಿವಮೊಗ್ಗ ಡಿಎಸ್ಪಿ ಪ್ರಶಾಂತ್ ಮುನ್ನೋಳಿ ಮತ್ತು ದೊಡ್ಡಪೇಟೆ ಇನ್‌ಸ್ಪೆಕ್ಟರ್ ಹರೀಶ್ ಪಟೇಲ್ ನೇತೃತ್ವದ ತಂಡ ದಾಳಿ ನಡೆಸಿ 31 ಬಾಕ್ಸ್ ನಕಲಿ ನೋನಿ ಔಷಧವನ್ನು ವಶಪಡಿಸಿಕೊಂಡಿದೆ.

ಫಾರ್ಮಸಿಸ್ಟ್ ಅಶೋಕ್ ನಕಲಿ ಅಮೃತ್ ನೋನಿ ಔಷಧವನ್ನು ಚಂಡೀಘಡದಿಂದ ತರಿಸುತ್ತಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಈ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.