ADVERTISEMENT

‘ಪ್ರೇಮ ಪ್ರವಾಹಿನಿ’ ರಥಯಾತ್ರೆ ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2026, 4:29 IST
Last Updated 25 ಫೆಬ್ರುವರಿ 2026, 4:29 IST
<div class="paragraphs"><p>ಪ್ರೇಮ ಪ್ರವಾಹಿನಿ ರಥಯಾತ್ರೆ</p></div>

ಪ್ರೇಮ ಪ್ರವಾಹಿನಿ ರಥಯಾತ್ರೆ

   

ಶಿವಮೊಗ್ಗ: ಸತ್ಯ ಸಾಯಿಬಾಬಾ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ನಡೆಯುತ್ತಿರುವ ‘ಪ್ರೇಮ ಪ್ರವಾಹಿನಿ’ ರಥಯಾತ್ರೆಯು ಫೆ.25ರಿಂದ 28ರ ವರೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ಸಂಚರಿಸಲಿದೆ ಎಂದು ರಾಜ್ಯ ಸಂಯೋಜಕ ಪ್ರಭಾಕರ ಬೀರಯ್ಯ ತಿಳಿಸಿದ್ದಾರೆ. 

ಫೆ.25ರಂದು ಶಿಕಾರಿಪುರ ಮೂಲಕ ಜಿಲ್ಲೆಗೆ ಬರುವ ರಥಯಾತ್ರೆ, ಫೆ.26ರಂದು ಸಾಗರ ಹಾಗೂ ಶಿವಮೊಗ್ಗ ನಗರದಲ್ಲಿ, ಫೆ.27ರಂದು ತೀರ್ಥಹಳ್ಳಿ ಮತ್ತು ಭದ್ರಾವತಿ ತಾಲ್ಲೂಕುಗಳಲ್ಲಿ, ಫೆ.28ರಂದು ಶಿವಮೊಗ್ಗ ನಗರದಲ್ಲಿ ಸಂಚರಿಸಲಿದೆ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. 

ADVERTISEMENT

ವಿವಿಧ ಕಡೆ ಮೆರವಣಿಗೆ, ಭಜನೆ, ಸಂಗೀತ ಕಾರ್ಯಕ್ರಮ, ಪಾದುಕೆಯ ದರ್ಶನ ಹಾಗೂ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿದೆ ಎಂದರು.

ಸೌಮ್ಯಾ, ಮಲ್ಲಿಕಾರ್ಜುನ ಗೌಡ್ರು, ಜಿ.ಗೋಪಾಲ್, ಪರಮೇಶ್ವರಪ್ಪ, ಶಿವನಾಗಪ್ಪ, ಕರಿಬಸಪ್ಪ, ಡಾ.ಆರ್.ಆದರ್ಶ ಪಡಿಯಾರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.