ADVERTISEMENT

ವಿಪ್ರ ನೌಕರರ ಸಂಘ: 27ಕ್ಕೆ ಹಲವು ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2019, 10:41 IST
Last Updated 24 ಆಗಸ್ಟ್ 2019, 10:41 IST

ಶಿವಮೊಗ್ಗ: ಕುವೆಂಪು ರಂಗಮಂದಿರದಲ್ಲಿ ಆ.27ರಂದು ಸಂಜೆ 6ಕ್ಕೆ ವಿಪ್ರ ನೌಕರರ ಕ್ಷೇಮಾಭಿವೃದ್ಧಿ ಸಂಘ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದೆ.

ವಿಪ್ರ ನೌಕರರ ಸಂಘ 15ನೇ ವರ್ಷದಲ್ಲಿ ಸಾಗುತ್ತಿದೆ. ಅಂದು ಪ್ರತಿಭಾ ಪುರಸ್ಕಾರ, ಸುವರ್ಣ ದಾಂಪತ್ಯ ಸನ್ಮಾನ, ಅಭಿನಂದನಾ ಸಮಾರಂಭ ಹಮ್ಮಿಕೊಂಡಿದೆ
ಎಂದು ಸಂಘದ ಅದ್ಯಕ್ಷ ಎಚ್.ಕೆ.ಕೇಶವಮೂರ್ತಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಪ್ರತಿ ವರ್ಷವೂ ಜಾಗೃತಿ ಸಮಾವೇಶ, ಕ್ರೀಡೆ, ಉಪನ್ಯಾಸ, ದಂಪತಿಗೆ ಸನ್ಮಾನ, ಸಂಗೀತ ಸಂಜೆ ಹೀಗೆ ಹಲವು ಸಮಾಜಮುಖಿ ಕಾರ್ಯಕ್ರಮ ನೀಡಿದೆ. ಊ ವರ್ಷ 50 ವರ್ಷ ದಾಂಪತ್ಯ ಪೂರೈಸಿದ ದಂಪತಿಗಳನ್ನು ಸನ್ಮಾನಿಸಲಾಗುವುದು. ಶೇಷಮ್ಮ-ಬಿ.ಎಂ.ಸುಬ್ರಮಣ್ಯ, ಸಾವಿತ್ರಮ್ಮ- ಕೆ.ಎಂ.ರಾಮಸ್ವಾಮಿ, ಗೋದಾಲಕ್ಷ್ಮಿ-ವಿ.ಆರ್.ರಾಮಸ್ವಾಮಿ ಅಯ್ಯಂಗಾರ್, ವಿಮಲಭಟ್- ಲಕ್ಷ್ಮಿನಾರಾಯಣ ಭಟ್, ಉಮಾ- ಹರಿನಾರಾಯಣ ಅವರನ್ನು ಸನ್ಮಾನಿಸಲಾಗುವುದು ಎಂದರು.

ADVERTISEMENT

ಹಿರಿಯರಾದ ಪಿ.ವಿ.ರಾಜಲಕ್ಷ್ಮಿ, ಎಚ್.ಕೆ.ಕೇಶಮೂರ್ತಿ, ವನಜಾ, ಎಂ.ವಿ.ಶ್ರೀನಿವಾಸ್, ವೈದ್ಯಕೀಯ ಕ್ಷೇತ್ರದಲ್ಲಿ ಹೆಸರು ಮಾಡಿದ ಡಾ.ಎಸ್.ಶ್ರೀಧರ್, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರನ್ನು ಅಭಿನಂದಿಸಲಾಗುವುದು ಎಂದು ವಿವರ ನೀಡಿದರು.

ಸಚಿವ ಕೆ.ಎಸ್.ಈಶ್ವರಪ್ಪ ಕಾರ್ಯಕ್ರಮ ಉದ್ಘಾಟಿಸುವರು. ಡಾ.ಸಂದ್ಯಾ ಕಾವೇರಿ ದಿಕ್ಸೂಚಿ ಭಾಷಣ ಮಾಡುವರು. ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಪ್ರಧಾನ ವಕ್ತಾರ ಮ.ಸ.ನಂಜುಂಡಸ್ವಾಮಿ, ಪ್ರಮುಖರಾದ ಆರ್.ಅಚ್ಚುತರಾವ್, ಅಬಸೆ ದಿನೇಶ್ ಕುಮಾರ್ ಎನ್.ಜೋಷಿ ಸೇರಿದಂತೆ ಹಲವರು ಉಪಸ್ಥಿತರಿರುವರು ಎಂದು ಮಾಹಿತಿ ನೀಡಿದರು.

ಬಡ ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ಕಾರ್ಯಕ್ರಮ ನಡೆಸುತ್ತಾ ಬಂದಿದ್ದೇವೆ. ಈ ಬಾರಿ ಸುಮಾರು 39 ವಿದ್ಯಾರ್ಥಿಗಳನ್ನು ಗುರುತಿಸಲಾಗಿದೆ. ₨ 4 ಲಕ್ಷ ಹಣವನ್ನು ನೀಡಲಾಗುವುದು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು. ನೆರೆ ಹಾನಿ ಸಂತ್ರಸ್ತರಿಗೆ ನೆರವು ನೀಡಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಗೌರವಾಧ್ಯಕ್ಷ ಎಚ್.ಎನ್.ಛಾಯಾಪತಿ, ಉಪಾಧ್ಯಕ್ಷ ಜಿ.ಎಸ್.ಅನಂತ್, ಕಾರ್ಯದರ್ಶಿ ಬಿ.ಕೆ.ರವೀಂದ್ರನಾಥ್, ಪ್ರಮುಖರಾದ ಆರ್.ಅಚ್ಚುತರಾವ್, ಎಚ್.ಸಿ.ರವಿಕುಮಾರ್, ಎಸ್.ನಾಗೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.