ADVERTISEMENT

ಅಕ್ಟೋಬರ್ 12ರಂದು ‘ಶ್ರೀಕೃಷ್ಣ ಸಂಧಾನ’ ನಾಟಕ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2019, 12:48 IST
Last Updated 10 ಅಕ್ಟೋಬರ್ 2019, 12:48 IST

ಶಿವಮೊಗ್ಗ: ಹೊಂಗಿರಣ ಸಂಸ್ಥೆ ಕುವೆಂಪು ರಂಗಮಂದಿರದಲ್ಲಿ ಅ.12ರಂದು ಸಂಜೆ 7ಕ್ಕೆ ‘ಶ್ರೀಕೃಷ್ಣ ಸಂಧಾನ’ ಹಾಸ್ಯ ನಾಟಕ ಪ್ರದರ್ಶಿಸಲಿದೆ.

ಹೊಸ ನಾಟಕಗಳನ್ನು ರಂಗಕ್ಕೆ ತರಲು ಸಂಸ್ಥೆಯನ್ನು ಬಲಪಡಿಸುವ ಅನಿವಾರ್ಯತೆ ಇದೆ. ಅದಕ್ಕಾಗಿ ಹಿಂದೆ ಪ್ರದರ್ಶಿಸಿದ ನಾಟಕವನ್ನೇ ಆಯ್ಕೆ ಮಾಡಿಕೊಳ್ಳಲಾಗಿದೆ. ₨ 50 ಪ್ರವೇಶಧನ ನಿಗದಿ ಮಾಡಲಾಗಿದೆ ಎಂದು ರಂಗಕರ್ಮಿ ಡಾ.ಸಾಸ್ವೆಹಳ್ಳಿ ಸತೀಶ್ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಶ್ರೀಕೃಷ್ಣ ಸಂಧಾನ ಹಾಸ್ಯ ನಾಟಕ. ಈಗಾಗಲೇ ಹಲವು ಪ್ರದರ್ಶನ ಕಂಡಿದೆ. ಮತ್ತೆ ಮತ್ತೆ ಪ್ರೇಕ್ಷರನ್ನು ಗಮನಸೆಳೆಯುತ್ತಿದೆ. ಈ ಬಾರಿಯ ಪ್ರದರ್ಶನವೂ ಯಶಸ್ವಿಯಾಗಲಿದೆ. ಈ ನಾಟಕದಲ್ಲಿ ನಮ್ಮ ತಂಡದಿಂದಲೇ ಕಿರುತೆರೆಗೆ ಹೋಗಿ ಹೆಸರು ಮಾಡಿದ ಕಲಾವಿದರು ಅಭಿನಯಿಸುತ್ತಿದ್ದಾರೆ. ಮಗಳು ಜಾನಕಿ ಧಾರವಾಹಿಯ ಸಂಜನಾ ಪಾತ್ರಧಾರಿ ಸುಪ್ರಿಯಾ ರಾವ್, ಚಂದ್ರಶೇಖರ ಶಾಸ್ತ್ರಿ, ಶಿವಮೊಗ್ಗ ಹರೀಶ್ ಮುಖ್ಯಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕಾಮಿಡಿ ಕಿಲಾಡಿಗಳು ತಂಡದ ಚಂದ್ರಶೇಖರ ಹಿರೇಗೋಣಿಗೆರೆ ಈ ನಾಟಕ ನಿರ್ದೇಶಿಸಿದ್ದಾರೆ ಎಂದರು.

ADVERTISEMENT

ಹಲವು ಸಂಘ ಸಂಸ್ಥೆಗಳಿಗೆ ಅನುದಾನ ನೀಡಿದ ಸರ್ಕಾರ ಸದಾ ರಂಗ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಹೊಂಗಿರಣ ಸಂಸ್ಥೆಗೆ ಅನುದಾನ ನೀಡಿಲ್ಲ. ಎರಡು ವರ್ಷಗಳಿಂದ ಅನುದಾನವಿಲ್ಲದೆ ಹೊಸ ನಾಟಕ ಪ್ರದರ್ಶನ ಕಷ್ಟವಾಗುತ್ತಿದೆ ಎಂದು ಅಳಲು ತೋಡಿಕೊಂಡರು.

ಪತ್ರಿಕಾಗೋಷ್ಠಿಯಲ್ಲಿ ಶಿವಕುಮಾರ್ ಮಾವಲಿ, ಶಿವಮೊಗ್ಗ ಹರೀಶ್, ಮಂಜುನಾಥ್, ನೌಶದ್ ಹರ್ಲಾಪುರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.