ADVERTISEMENT

ಒಂದೇ ಸೂರಿನಡಿ ಎಲ್ಲ ಸರ್ಕಾರಿ ಕಚೇರಿಗಳು

ನೂತನ ಭವನ ನಿರ್ಮಾಣಕ್ಕೆ ₨ 30 ಕೋಟಿ ಅನುದಾನ; ಸಿ.ಎಸ್.ಷಡಾಕ್ಷರಿ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2020, 13:54 IST
Last Updated 22 ಫೆಬ್ರುವರಿ 2020, 13:54 IST
ಸಿ.ಎಸ್.ಷಡಾಕ್ಷರಿ
ಸಿ.ಎಸ್.ಷಡಾಕ್ಷರಿ   

ಶಿವಮೊಗ್ಗ: ಎಲ್ಲ ಸರ್ಕಾರಿ ಕಚೇರಿಗಳನ್ನೂ ಒಂದೇ ಸೂರಿನಡಿ ತರಲು ನೂತನ ಜಿಲ್ಲಾಡಳಿತ ಭವನ ನಿರ್ಮಿಸಲಾಗುವುದು. ಅದಕ್ಕಾಗಿ ಮುಖ್ಯಮಂತ್ರಿಬಿ.ಎಸ್.ಯಡಿಯೂರಪ್ಪ ಅವರು ₹30 ಕೋಟಿ ಅನುದಾನ ನೀಡಿದ್ದಾರೆ.

ಶಿವಮೊಗ್ಗ ಜಿಲ್ಲಾ ಕೇಂದ್ರದಲ್ಲಿಹಲವುಕಚೇರಿಗಳು ಈಗಲೂ ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ನೂತನ ಭವನ ನಿರ್ಮಾಣದ ನಂತರಎಲ್ಲಾ ಕಚೇರಿಗಳೂಸ್ವಂತ ಕಟ್ಟಡ ಹೊಂದಲಿವೆ. ಯಡಿಯೂರಪ್ಪ ಅವರು ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ನೀಡುವ ಜತೆಗೆ, ಸರ್ಕಾರಿ ನೌಕರರ ಹಲವು ಬೇಡಿಕೆ ಈಡೇರಿಸಿದ್ದಾರೆ.ಎಲ್ಲ ನೌಕರರ ಪರವಾಗಿ ಅವರನ್ನುಸಂಘ ಅಭಿನಂದಿಸುತ್ತದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ನಾಲ್ಕನೇ ಶನಿವಾರ ಸಾರ್ವತ್ರಿಕ ರಜೆ ಘೋಷಿಸಲಾಗಿತ್ತು. ಆಗಸಾಂದರ್ಭಿಕ ರಜೆಗಳನ್ನು15ರಿಂದ 10ಕ್ಕೆ ಇಳಿಸಲಾಗಿತ್ತು.ಸಂಘದ ಮನವಿಗೆ ಸ್ಪಂದಿಸಿದ ಯಡಿಯೂರಪ್ಪ ಅವರು ನಾಲ್ಕನೇ ಶನಿವಾರ ಅನ್ವಯಿಸದ ನೌಕರರಿಗೆ ಈ ಹಿಂದಿನಂತೆ 15 ಸಾಂದರ್ಭಿಕ ರಜೆ ಸೌಲಭ್ಯ ಮುಂದುವರಿಸಲು ಆದೇಶಿಸಿದ್ದಾರೆ ಎಂದು ಸ್ಮರಿಸಿದರು.

ADVERTISEMENT

ಶಿವಮೊಗ್ಗದ ಡಿಸಿ ಕಾಂಪೌಂಡ್‌ನಲ್ಲಿರುವ ಸಂಘದ ತರಬೇತಿ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ,ಕೆಇಬಿವೃತ್ತದ ಸಮೀಪದ ಜಾಗದಲ್ಲಿ ನೌಕರರ ಸಮುದಾಯ ಭವನನಿರ್ಮಾಣಕ್ಕೆ ₨4 ಕೋಟಿ ಅನುದಾನ, ಶಿವಮೊಗ್ಗದಲ್ಲಿ ಗುರುಭವನದ ನೂತನ ಕಟ್ಟಡ ನಿರ್ಮಾಣಕ್ಕೆ ₨ 2 ಕೋಟಿ ಅನುದಾನ ನೀಡಿದ್ದಾರೆ ಎಂದರು.

ಲೋಕೋಪಯೋಗಿ ಇಲಾಖೆಗೆ ರಾಜ್ಯದಲ್ಲಿ ಪ್ರಸ್ತುತ ದಕ್ಷಿಣ, ಉತ್ತರ,ಎರಡುಮುಖ್ಯ ಇಂಜಿನಿಯರ್‌ ಅವರಕೇಂದ್ರ ಕಚೇರಿ ಇದೆ.ಸಂಘದ ಮನವಿ ಮೇರೆಗೆ ಶಿವಮೊಗ್ಗ ಜಿಲ್ಲಾ ಕೇಂದ್ರ ಸ್ಥಾನದಲ್ಲಿ ಲೋಕೋಪಯೋಗಿ ಇಲಾಖೆಯ ಕೇಂದ್ರ ವಲಯದ ಮುಖ್ಯ ಎಂಜಿನಿಯರ್ ಕಚೇರಿ ಆರಂಭಿಸಲು ತಾತ್ವಿಕ ಒಪ್ಪಿಗೆ ದೊರೆತಿದೆ. ಸಂಘದ ಮನವಿಗೆ ಸ್ಪಂದಿಸಿ 300 ವಸತಿ ಗೃಹಗಳ ನಿರ್ಮಾಣಕ್ಕೆ₹ 40 ಕೋಟಿ ಅನುದಾನ ಬಿಡುಗಡೆ ಮಾಡಲು ಒಪ್ಪಿಗೆ ಸೂಚಿಸಿದ್ದಾರೆ. ಈ ಎಲ್ಲ ಬೇಡಿಕೆ ಯಡಿಯೂರಪ್ಪ ಅವರು ಈಡೇರಿಸಲುಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ, ವಿಧಾನಸಭೆ, ವಿಧಾನ ಪರಿಷತ್‌ ಸದಸ್ಯರು ಸಹಕರಿಸಿದ್ದಾರೆಎಂದುಧನ್ಯವಾದ ಸಲ್ಲಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಐ.ಪಿ.ಶಾಂತರಾಜ್, ಆರ್.ಮೋಹನ್‌ಕುಮಾರ್, ಆರ್.ಪಾಪಣ್ಣ, ಎಚ್.ಎನ್. ರಘು, ದಿನೇಶ್, ಅಂತೋಣಿರಾಜ್, ರುದ್ರಪ್ಪಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.