ADVERTISEMENT

ಸರ್ಕಾರಿ ನೌಕರರಿಗೇ ಪ್ರತ್ಯೇಕ ಖರೀದಿ ಕೇಂದ್ರ :ಸಿ.ಎಸ್.ಷಡಾಕ್ಷರಿ 

ರಿಯಾಯಿತಿ ದರದಲ್ಲಿ ದಿನಸಿ ಹಾಗೂ ಗೃಹ ಬಳಕೆ ಸಾಮಗ್ರಿಗಳು ಲಭ್ಯ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2019, 16:44 IST
Last Updated 24 ಡಿಸೆಂಬರ್ 2019, 16:44 IST
ಸಿ.ಎಸ್.ಷಡಾಕ್ಷರಿ
ಸಿ.ಎಸ್.ಷಡಾಕ್ಷರಿ   

ಶಿವಮೊಗ್ಗ: ಸರ್ಕಾರಿ ನೌಕರರಿಗೆ ಇನ್ನು ಮುಂದೆ ವಿಶೇಷ ರಿಯಾಯಿತಿ ದರದಲ್ಲಿ ದಿನಸಿ-ಗೃಹ ಬಳಕೆ ವಸ್ತುಗಳು ದೊರೆಯಲಿವೆ.

ಸರ್ಕಾರಿ ನೌಕರರ ಸಂಘ ಶಿವಮೊಗ್ಗದಲಕ್ಷ್ಮಿ ಚಿತ್ರಮಂದಿರ ಹಿಂಭಾಗದ ಕಂದಾಯ ಇಲಾಖೆಯ ಕಟ್ಟಡದಲ್ಲಿ ಇಂತಹ ನೂತನ ಮಾರಾಟ ಕೇಂದ್ರ (ಕ್ಯಾಂಟಿನ್) ಹೊಸ ವರ್ಷದ ಮೊದಲ ತಿಂಗಳೇ ಆರಂಭವಾಗುತ್ತಿದೆ. ನಂತರ ಸರ್ಕಾರಿ ನೌಕರರ ಸಂಘದ ಕಟ್ಟಕ್ಕೆ ಸ್ಥಳಾಂತರವಾಗಲಿದೆಎಂದುರಾಜ್ಯ ಸಂಘದ ಅಧ್ಯಕ್ಷಸಿ.ಎಸ್.ಷಡಾಕ್ಷರಿಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಬೆಲೆ ಏರಿಕೆ ಮಧ್ಯೆ ಸರ್ಕಾರಿ ನೌಕರರು ದಿನನಿತ್ಯದ ಸಾಮಗ್ರಿ ಖರೀದಿಸಲು ಕಷ್ಟಪಡುತ್ತಿದ್ದಾರೆ. ಹಾಗಾಗಿ, ಸಂಘ ಇಂತಹ ಕೇಂದ್ರ ಆರಂಭಿಸುವ ನಿರ್ಧಾರ ಮಾಡಿದೆ. ಈ ಕೇಂದ್ರದಲ್ಲಿ ದಿನಸಿ ಹಾಗೂ ಗೃಹ ಬಳಕೆ ಸಾಮಗ್ರಿಗಳುಸುಲಭ ದರದಲ್ಲಿ ಸಿಗಲಿವೆ. ಸರ್ಕಾರಿ ನೌಕರರು ₨ 199 ಪಾವತಿಸಿ ನೋಂದಣಿ ಮಾಡಿಸಬೇಕು. ಸಂಸ್ಥೆಯ ಗುರುತಿನ ಚೀಟಿ, ಆಧಾರ್ ಕಾರ್ಡ್, ಫೋಟೊ, ವೇತನ ಪ್ರಮಾಣ ಪತ್ರ ನೀಡಬೇಕು.ಗೃಹ ಬಳಕೆ ವಸ್ತುಗಳಿಗೆ ಸಾಲದ ಸೌಲಭ್ಯವೂ ದೊರಕಲಿದೆ. ಅವರ ವೇತನ ಪ್ರಮಾಣ ಪತ್ರದ ಆಧಾರದ ಮೇಲೆ ನೀಡುವ ಸಾಲದ ಮೊತ್ತ ನಿರ್ಧಾರವಾಗುತ್ತದೆ. ದಿನಸಿ ಸಾಲ ಒಂದೇ ಕಂತಿನಲ್ಲಿ ಕಡಿತ ಮಾಡುವ ಪದ್ಧತಿ ಅಳವಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ADVERTISEMENT

ಜಿಲ್ಲೆಯಲ್ಲಿ ಸುಮಾರು 20 ಸಾವಿರಸರ್ಕಾರಿನೌಕರರು ಇದ್ದಾರೆ. ಮೊದಲ ಹಂತದಲ್ಲಿ 5 ಸಾವಿರ ನೌಕರರ ನೋಂದಣಿಗುರಿ ಇದೆ.ಪ್ರತಿ ಸಾಮಗ್ರಿಗೂಶೇ 10ರಿಂದ 40ರವರೆಗೆ ರಿಯಾಯಿತಿ ನೀಡಲಾಗುವುದು.ಗೃಹ ಬಳಕೆ ವಸ್ತುಗಳ ಮಾರಾಟ ಕೇಂದ್ರ ಸಾಯಿಇಂಟರ್ನ್ಯಾಷನಲ್ ಸಂಸ್ಥೆಜತೆ ಹೊಂದಾಣಿಕೆ ಮಾಡಿಕೊಂಡಿದೆ. ವಿವಿಧಕಂಪನಿಗಳಮೊಬೈಲ್, ಟಿವಿ, ರೆಫ್ರಿಜರೇಟರ್, ವಾಷಿಂಗ್ ಮಿಷನ್‌ಗಳೂ ಸುಲಭ ದರಗಳಲ್ಲಿದೊರೆಯಲಿವೆ ಎಂದರು.

ಸಂಘ ಈಗಾಗಲೇ ನೌಕರರ ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸುತ್ತಿದೆ. ಹಲವುಜ್ವಲಂತ ಸಮಸ್ಯೆಗಳು ಇವೆ. ಹಂತ ಹಂತವಾಗಿಎಲ್ಲವನ್ನೂನಿವಾರಿಸಲಾಗುವುದು.

ಅದಕ್ಕಾಗಿ ರಾಜ್ಯಮಟ್ಟದ ಜಂಟಿ ಸಮಾಲೋಚನಾ ಸಮಿತಿರಚಿಸಲಾಗಿದೆ.ಜಿಲ್ಲಾಮಟ್ಟಕ್ಕೂಈ ಸಮಿತಿವಿಸ್ತರಿಸಲಾಗಿದೆ. ಕಾಲಮಿತಿ ವೇತನ ಬಡ್ತಿ, ವೇತನ ವಿಳಂಬ,ಜ್ಯೇಷ್ಠಾತಾ ದೋಷ,ನೌಕರರ ಮೇಲಿನ ಹಲ್ಲೆಗಳ ನಿಯಂತ್ರಣಸಂಘದ ಪ್ರಮುಖ ಗುರಿ. ಜತೆಗೆ ಪೊಲೀಸ್ ಮಾದರಿಯಲ್ಲಿ ರಾಜ್ಯದ ಪ್ರತಿಷ್ಟಿತ ಆಸ್ಪತ್ರೆಗಳಲ್ಲಿ ಎಲ್ಲ ಕಾಯಿಲೆಗಳಿಗೂನಗದುರಹಿತ ಚಿಕಿತ್ಸಾ ಸೌಲಭ್ಯ ನೀಡಲು ಸರ್ಕಾರದ ಜತೆ ಚರ್ಚಿಸಲಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಶಾಂತರಾಜು, ಮೋಹನ್ ಕುಮಾರ್, ಕೃಷ್ಣಮೂರ್ತಿ,ಮ.ಸ.ನಂಜುಂಡಸ್ವಾಮಿ, ಪಾಪಣ್ಣ, ಸಂಜೀವ್, ಅರುಣ್, ದಿನೇಶ್, ಸತೀಶ್ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.