ADVERTISEMENT

ವಸ್ತು ಪ್ರದರ್ಶನ ಸೃಜನಶೀಲತೆಯ ಕನ್ನಡಿ: ರಮೇಶ್

​ಪ್ರಜಾವಾಣಿ ವಾರ್ತೆ
Published 25 ಜನವರಿ 2020, 12:48 IST
Last Updated 25 ಜನವರಿ 2020, 12:48 IST
ಶಿವಮೊಗ್ಗದ ಕಲ್ಲಹಳ್ಳಿಯ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಮಕ್ಕಳ ವಸ್ತು ಪ್ರದರ್ಶನವನ್ನು ಗ್ಲೋಬಲ್ ಎಜುಕೇಷನ್ ಸೊಸೈಟಿ ಕಾರ್ಯದರ್ಶಿ ಎನ್.ರಮೇಶ್ ವೀಕ್ಷಿಸಿದರು.
ಶಿವಮೊಗ್ಗದ ಕಲ್ಲಹಳ್ಳಿಯ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಮಕ್ಕಳ ವಸ್ತು ಪ್ರದರ್ಶನವನ್ನು ಗ್ಲೋಬಲ್ ಎಜುಕೇಷನ್ ಸೊಸೈಟಿ ಕಾರ್ಯದರ್ಶಿ ಎನ್.ರಮೇಶ್ ವೀಕ್ಷಿಸಿದರು.   

ಶಿವಮೊಗ್ಗ: ಶಾಲೆಗಳಲ್ಲಿ ನಡೆಯುವ ವಸ್ತು ಪ್ರದರ್ಶನಗಳು ಮಕ್ಕಳ ಬುದ್ದಿಶಕ್ತಿ ಹೆಚ್ಚಿಸುತ್ತದೆ. ಸೃಜನಶೀಲತೆಗೆ ಕನ್ನಡಿಯಾಗಿವೆ ಎಂದುಗ್ಲೋಬಲ್ ಎಜುಕೇಷನ್ ಸೊಸೈಟಿ ಕಾರ್ಯದರ್ಶಿಎನ್.ರಮೇಶ್ ಹೇಳಿದರು.

ಕಲ್ಲಹಳ್ಳಿಯ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆಆವರಣದಲ್ಲಿ ಶನಿವಾರ ಆಯೋಜಿಸಿದ್ದ ಮಕ್ಕಳ ವಸ್ತು ಪ್ರದರ್ಶನ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮಕ್ಕಳ ಮನಸ್ಸು ಬಹುಬೇಗ ಆಸಕ್ತಿ ಮತ್ತು ಕುತೂಹಲಕ್ಕೆ ಒಳಗಾಗುತ್ತದೆ. ಪಠ್ಯದ ವಿಷಯಗಳು ಎಷ್ಠೇ ಬಾರಿ ಓದಿದರೂ ಸುಲಭವಾಗಿ ಅರ್ಥವಾಗುವುದಿಲ್ಲ. ಆದರೆ, ಇಂತಹ ಪ್ರದರ್ಶನಗಳುಸುಲಭ ವಿಷಯ ಗ್ರಹಿಕೆಗೆ ಸಹಕಾರಿಯಾಗುತ್ತದೆ. ವಸ್ತು ಪ್ರದರ್ಶನದ ಹಿಂದೆ ಪೋಷಕರು, ಮಕ್ಕಳು, ಶಿಕ್ಷಕರ ಆಸಕ್ತಿ ಇದೆ. ಶಿಕ್ಷಣದ ಒಂದುಭಾಗವಾಗಿರೂಪುಗೊಂಡಿದೆ ಎಂದರು.

ADVERTISEMENT

ವಸ್ತು ಪ್ರದರ್ಶನದಲ್ಲಿ ಮಕ್ಕಳು ಮಾಡಿದ ವಿವಿಧ ಬಗೆಯ ಮಾಡೆಲ್‌ಗಳುಗಮನ ಸೆಳೆದವು. ಹಸಿರೀಕರಣ, ಭೂಮಿ, ಗಣಿತದ ಸೂತ್ರಗಳು, ಹೊಸ ತಂತ್ರಜ್ಞಾನ., ಗಡಿಯಾರ, ಆಸ್ಪತ್ರೆ, ನಮ್ಮ ರಸ್ತೆಗಳು, ಗುಡಿ ಗೋಪುರಗಳು, ಮೊಬೈಲ್ ತಂತ್ರಜ್ಙಾನ, ತರಕಾರಿಗಳು, ಬೆಳೆಯುವ ರೀತಿ, ಸಾವಯವ ಗೊಬ್ಬರ, ರೈತನ ದುಡಿಮೆ, ಮಣ್ಣು, ಉದ್ಯಾನ ಹೀಗೆ ನೂರಾರು ವಿಷಯಗಳಮೇಲೆ ಮಕ್ಕಳು ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.ಪುಟ್ಟ ಮಕ್ಕಳೂಶ್ರದ್ದೆಯಿಂದ ಬಗೆಬಗೆಯ ಮಾಡೆಲ್‌ಗಳನ್ನು ತಂದು ಪ್ರದರ್ಶನಕ್ಕೆ ಇಟ್ಟಿದ್ದು ವಿಶೇಷವಾಗಿತ್ತು. ಪೋಷಕರೂ ಮಕ್ಕಳ ಉತ್ಸಾಹದಲ್ಲಿಭಾಗಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.