ADVERTISEMENT

ಸೊರಬ: ಸಹಕಾರ ಸಂಘಕ್ಕೆ ₹ 9.5 ಲಕ್ಷ ಲಾಭ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2022, 5:35 IST
Last Updated 25 ಸೆಪ್ಟೆಂಬರ್ 2022, 5:35 IST
ಸೊರಬ ತಾಲ್ಲೂಕಿನ ಮಳಲಗದ್ದೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯನ್ನು ಸಂಘದ ಅಧ್ಯಕ್ಷ ಎಂ.ಆರ್. ಅಶೋಕ ಹೆಗಡೆ ಉದ್ಘಾಟಿಸಿದರು.
ಸೊರಬ ತಾಲ್ಲೂಕಿನ ಮಳಲಗದ್ದೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯನ್ನು ಸಂಘದ ಅಧ್ಯಕ್ಷ ಎಂ.ಆರ್. ಅಶೋಕ ಹೆಗಡೆ ಉದ್ಘಾಟಿಸಿದರು.   

ಸೊರಬ: ಷೇರುದಾರರ ಹಾಗೂ ಸಂಘದ ನಿರ್ದೇಶಕರ ಸಹಕಾರದಿಂದ ಸಂಘವು ಪ್ರಸ್ತಕ ವರ್ಷದಲ್ಲಿ ₹ 9,5 ಲಕ್ಷ ಲಾಭ ಗಳಿಸಿದೆ ಎಂದು ಮಳಲಗದ್ದೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ.ಆರ್. ಅಶೋಕ ಹೆಗಡೆ ಹೇಳಿದರು.

ಶನಿವಾರ ಹಮ್ಮಿಕೊಂಡಿದ್ದ ಸಂಘದ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಸಂಘ 62 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಹಲವು ವರ್ಷಗಳಿಂದ ನಷ್ಟದಲ್ಲಿತ್ತು. ಈ ಬಾರಿ ಲಾಭಾಂಶಕ್ಕೆ ಕಾಲಿಟ್ಟಿದ್ದು ಸಂತಸ ತಂದಿದೆ. ಮುಂದಿನ ವರ್ಷದಲ್ಲಿ₹ 13 ಲಕ್ಷ ಲಾಭ ಬರುವ ನೀರಿಕ್ಷೆ ಇದೆ. ಸಂಘದಲ್ಲಿ 1,238 ಷೇರುದಾರರಿದ್ದು,₹ 6 ಕೋಟಿ ಬೆಳೆಸಾಲ ನೀಡಲಾಗಿದೆ. ಸಾಲ ವಸೂಲಿಯಾಗಿದೆ. ಹೊಸ ಷೇರುದಾರರು ಸೇರಿದಂತೆ ₹ 10 ಕೋಟಿ ಸಾಲ ನೀಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ADVERTISEMENT

ಉಳವಿಯಲ್ಲಿದ್ದ ಸಂಘದ ಕಚೇರಿಯನ್ನು ಮಳಲಗದ್ದೆ ಸಂಘದ ಸಂತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಅಲ್ಲಿಯೇ ಉಗ್ರಾಣ ಕೊಠಡಿಯನ್ನು ನಿರ್ಮಾಣ ಮಾಡಿ ಕೃಷಿಕರಿಗೆ ರಸಗೊಬ್ಬರ, ಬೀಜ ಮತ್ತು ಪರಿಕರಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುವುದು ಎಂದರು.

ರೈತರಿಗೆ ಅಗತ್ಯವಿರುವ ಪಹಣೆ ನೀಡಲಾಗುವುದು. ಬೆಳೆವಿಮೆಯನ್ನುಇಲ್ಲಿಯೇ ಕಟ್ಟಿಸಿಕೊಳ್ಳಲಾಗುವುದು ಎಂದರು.

ಉಪಾಧ್ಯಕ್ಷ ಕೆ.ಎಂ. ಗಣಪತಿ, ನಿರ್ದೇಶಕರಾದ ಕೀರ್ತಿರಾಜ ಕಾನಹಳ್ಳಿ, ಕೆ. ಪರಶುರಾಮ್, ಬಿ.ರಾಮಪ್ಪ, ನಾಗಾರ್ಜುನ ಸತ್ಯಪ್ಪ, ಬರಗಿ ನಿಂಗಪ್ಪ, ಜಗದೀಶ ಕುಪ್ಪೆ, ಭಾಸ್ಕರ್ ಬರಗಿ, ಪಟ್ಟಪ್ಪ, ರೇವಣಪ್ಪ, ಸುಮಾ, ಸಿಇಒ ಎಚ್.ಎಂ. ವಿನಯ್, ಪ್ರದೀಪ್‌ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.