ADVERTISEMENT

ಬಲೆಗೆ ಸಿಲುಕಿದ್ದ ನಾಗರಹಾವು ರಕ್ಷಣೆ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2021, 2:06 IST
Last Updated 2 ಅಕ್ಟೋಬರ್ 2021, 2:06 IST
ಹೊಸನಗರದ ನೂಲಿಗ್ಗೇರಿ ಅರಣ್ಯ ಇಲಾಖೆಯ ಕ್ವಾರ್ಟರ್ಸ್ ಬಳಿ ಶುಕ್ರವಾರ ಬಲೆಯೊಳಗೆ ಸಿಲುಕಿದ್ದ ನಾಗರಹಾವನ್ನು ಸುರಕ್ಷಿತವಾಗಿ ಬಿಡಿಸಿ ಕಾಡಿಗೆ ಬಿಡಲಾಯಿತು
ಹೊಸನಗರದ ನೂಲಿಗ್ಗೇರಿ ಅರಣ್ಯ ಇಲಾಖೆಯ ಕ್ವಾರ್ಟರ್ಸ್ ಬಳಿ ಶುಕ್ರವಾರ ಬಲೆಯೊಳಗೆ ಸಿಲುಕಿದ್ದ ನಾಗರಹಾವನ್ನು ಸುರಕ್ಷಿತವಾಗಿ ಬಿಡಿಸಿ ಕಾಡಿಗೆ ಬಿಡಲಾಯಿತು   

ಹೊಸನಗರ: ಇಲ್ಲಿನ ನೂಲಿಗ್ಗೇರಿ ಅರಣ್ಯ ಇಲಾಖೆಯ ಕ್ವಾರ್ಟರ್ಸ್‌ ಬಳಿ ಶುಕ್ರವಾರ ಬಲೆಯೊಳಗೆ ಸಿಲುಕಿದ್ದ ನಾಗರಹಾವನ್ನು ಸುರಕ್ಷಿತವಾಗಿ ಬಿಡಿಸಿ ಕಾಡಿಗೆ ಬಿಡಲಾಯಿತು.

ಅರಣ್ಯ ಇಲಾಖೆಯ ಜೀಪ್ ಚಾಲಕ ರಾಮು ಅವರ ಮನೆಯ ಬೇಲಿಗೆ ಬಲೆ ಹಾಕಿದ್ದರು. ನಾಗರಹಾವು ಬಲೆಯೊಳಗೆ ಸಿಲುಕಿ ಒದ್ದಾಡುತ್ತಿತ್ತು. ಅದನ್ನು ಕಂಡ ಅವರು ಉರಗ ತಜ್ಞ ನಾರಾಯಣ ಕಾಮತ್ ಅವರಿಗೆ ಮಾಹಿತಿ ನೀಡಿದರು.

ಕೆಲಹೊತ್ತಿನ ಕಾರ್ಯಾಚರಣೆ ನಡೆಸಿದ ನಾರಾಯಣ ಕಾಮತ್ ಹಾವಿಗೆ ಯಾವುದೇ ಅಪಾಯವಾಗದಂತೆ ಎಚ್ಚರಿಕೆಯಿಂದ ಬಲೆಯಿಂದ ಬಿಡಿಸಿ ಸಮೀಪದ ಕಾಡಿಗೆ ಬಿಟ್ಟರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.