ADVERTISEMENT

ಆಲ್ಕೋಳ ವೃತ್ತದಲ್ಲಿ ಕೃಷ್ಣಪ್ಪ ಪ್ರತಿಮೆ ಸ್ಥಾಪಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2019, 12:37 IST
Last Updated 14 ನವೆಂಬರ್ 2019, 12:37 IST
ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಮುಂದೆ ಗುರುವಾರ ದಸಂಸ ಕಾರ್ಯಕರ್ತರು ಆಲ್ಕೊಳ ವೃತ್ತದಲ್ಲಿ ಪ್ರೊ.ಬಿ.ಕೃಷ್ಣಪ್ಪ ಅವರ ಪ್ರತಿಮೆ ಸ್ಥಾಪಿಸಲು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಮುಂದೆ ಗುರುವಾರ ದಸಂಸ ಕಾರ್ಯಕರ್ತರು ಆಲ್ಕೊಳ ವೃತ್ತದಲ್ಲಿ ಪ್ರೊ.ಬಿ.ಕೃಷ್ಣಪ್ಪ ಅವರ ಪ್ರತಿಮೆ ಸ್ಥಾಪಿಸಲು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.   

ಶಿವಮೊಗ್ಗ: ಆಲ್ಕೋಳದ ಪ್ರೊ.ಬಿ.ಕೃಷ್ಣಪ್ಪ ವೃತ್ತದ ಮಧ್ಯೆ ಕೃಷ್ಣಪ್ಪಅವರ ಕಂಚಿನ ಪ್ರತಿಮೆ ಸ್ಥಾಪಿಸಬೇಕು.ಆ ವೃತ್ತದಲ್ಲಿ ಅಭಿವೃದ್ದಿ ಕಾಮಗಾರಿ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಗುರುವಾರ ದಲಿತ ಸಂಷರ್ಷ ಸಮಿತಿ ಕಾರ್ಯಕರ್ತರು ಜಿಲ್ಲಾಧಿಕಾರಿಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಆಲ್ಕೋಳ ವೃತ್ತಕ್ಕೆ ದಸಂಸ ಸಂಸ್ಥಾಪಕ ಕೃಷ್ಣಪ್ಪವೃತ್ತ ಎಂದುನಾಮಕರಣ ಮಾಡಿ 5 ವರ್ಷ ಕಳೆದರೂ ಅಭಿವೃದ್ದಿ ಕಾಮಗಾರಿಗಳು ನಡೆದಿಲ್ಲ. ಅಭಿವೃದ್ಧಿಗಾಗಿಯೇ ₹1.20 ಕೋಟಿ ಮೀಸಲಿಟ್ಟಿದ್ದರೂ ಪಾಲಿಕೆ ಕ್ರಮ ಕೈಗೊಂಡಿಲ್ಲ. ಇದು ದಲಿತ ವಿರೋಧಿನಡೆ. ಇಂತಹ ಅಧಿಕಾರಿಗಳನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.

ವೃತ್ತದ ಮಧ್ಯಭಾಗದಲ್ಲಿ ಕೃಷ್ಣಪ್ಪಅವರ ಕಂಚಿನ ಪ್ರತಿಮೆ ಸ್ಥಾಪಿಸಬೇಕು. ಪಾಲಿಕೆಯ ಎಲ್ಲ ಕಡತಗಳಲ್ಲಿ, ದಾಖಲೆಗಳಲ್ಲಿ ಮತ್ತು ಜಾಹೀರಾತು ನೀಡುವಾಗ ಪ್ರೊ.ಬಿ.ಕೃಷ್ಣಪ್ಪ ವೃತ್ತ ಎಂದೇ ನಮೂದಿಸಬೇಕು. ಅಭಿವೃದ್ಧಿಕಾಮಗಾರಿ ತಕ್ಷಣದಿಂದಲೇ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಶಿಕ್ಷಣ ಇಲಾಖೆ ಆಯುಕ್ತರ ವಜಾಕ್ಕೆ ಆಗ್ರಹ:ಅಂಬೇಡ್ಕರ್ ಒಬ್ಬರೇ ಸಂವಿಧಾನ ರಚಿಸಿಲ್ಲ ಎಂದು ಹೇಳುವ ಮೂಲಕ ವಿವಾದ ಹುಟ್ಟುಹಾಕಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರ ಹೇಳಿಕೆ ಖಂಡಿಸಿದರು.

ಇದು ಮಕ್ಕಳಿಗೆ ತಪ್ಪು ಸಂದೇಶ ಕೊಡುತ್ತದೆ ಮತ್ತು ಅಂಬೇಡ್ಕರ್ ಅವರಿಗೆ ಮಾಡಿದ ಅವಮಾನ.ಅಂಬೇಡ್ಕರ್ ಅವರು ಸಂವಿಧಾನಶಿಲ್ಪಿ ಎಂದೇ ಹೆಸರಾಗಿದ್ದಾರೆ. ಮೂಲಕ ಮಕ್ಕಳ ಮನಸ್ಸಿನಲ್ಲಿ ಬೇರೆ ವಿಷಯ ತುಂಬಲು ಹೊರಟಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ಈ ಕ್ರಮ ಖಂಡನೀಯ ಎಂದುಆಕ್ರೋಶ ವ್ಯಕ್ತಪಡಿಸಿದರು.

ದಸಂಸ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ, ಮುಖಂಡರಾದ ಎ.ಅರ್ಜುನ್,ಎಂ.ಏಳುಕೋಟಿ, ಎಂ.ರಮೇಶ್, ರುದ್ರಮ್ಮ, ನಾಗರಾಜ್‌,ವಿನೋದ್, ರಮೇಶ್ ಚಿಕ್ಕಮರಡಿ,ಹಸವಿ ಬಸವರಾಜ್, ಹರಿಗೆ ರವಿಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.