ADVERTISEMENT

ತುಂಗಾ ಸೇತುವೆ ಮೇಲೆ ಅಪಘಾತ ತಡೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2020, 10:46 IST
Last Updated 11 ಫೆಬ್ರುವರಿ 2020, 10:46 IST
ಶಿವಮೊಗ್ಗ ಹೊಳೆ ಬಸ್‌ನಿಲ್ದಾಣದ ತುಂಗಾ ಸೇತುವೆ ಮೇಲೆ ಅಪಘಾತಗಳ ತಡೆಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಮಂಗಳವಾರ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ವೇದಾ ವಿಜಯ್ ಕುಮಾರ್ ನೇತೃತ್ವದಲ್ಲಿ ಸಾರ್ವಜನಿಕರು ಪ್ರತಿಭಟನೆ ನಡೆಸಿದರು.
ಶಿವಮೊಗ್ಗ ಹೊಳೆ ಬಸ್‌ನಿಲ್ದಾಣದ ತುಂಗಾ ಸೇತುವೆ ಮೇಲೆ ಅಪಘಾತಗಳ ತಡೆಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಮಂಗಳವಾರ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ವೇದಾ ವಿಜಯ್ ಕುಮಾರ್ ನೇತೃತ್ವದಲ್ಲಿ ಸಾರ್ವಜನಿಕರು ಪ್ರತಿಭಟನೆ ನಡೆಸಿದರು.   

ಶಿವಮೊಗ್ಗ: ಹೊಳೆ ಬಸ್‌ನಿಲ್ದಾಣದ ತುಂಗಾ ಸೇತುವೆ ಮೇಲೆ ನಿರಂತರವಾಗಿಅಪಘಾತಗಳು ಸಂಭವಿಸುತ್ತಿವೆ. ಅಪಘಾತಗಳ ತಡೆಗೆ ಜಿಲ್ಲಾಡಳಿತ, ಜಿಲ್ಲಾ ಪೊಲೀಸರುಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಮಂಗಳವಾರ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ವೇದಾ ವಿಜಯ್ ಕುಮಾರ್ನೇತೃತ್ವದಲ್ಲಿ ಸಾರ್ವಜನಿಕರು ಪ್ರತಿಭಟನೆ ನಡೆಸಿದರು.

ತುಂಗಾ ಸೇತುವೆ ಮೇಲೆ ವಾಹನ ಸಂಚಾರದಟ್ಟಣೆ ಮೀತಿಮೀರಿದೆ. ಹೊಳೆಹೊನ್ನೂರು ರಸ್ತೆಯ ರೈಲ್ವೆ ಗೇಟ್ ಹಾಕಿದಾಗ ಸೇತುವೆ ಮೇಲೆವಾಹನಗಳು ಸಾಲುಗಟ್ಟಿ ನಿಂತಿರುತ್ತವೆ. ಸೇತುವೆಬಳಿಇರುವ ಗಡಿ ಆಂಜನೇಯ ಸ್ವಾಮಿ ದೇವಸ್ಥಾನಕ್ಕೂ ಸಂಜೆ ಮತ್ತು ಬೆಳಿಗ್ಗೆ ಅಧಿಕ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ ಎಂದು ದೂರಿದರು.

ಹಳೆಯ ಸೇತುವೆ ಈಚೆಗೆ ಸುರಿದ ಮಳೆ, ತುಂಗಾ ಪ್ರವಾಹದ ಸಮಯದಲ್ಲಿ ಬಿರುಕುಬಿಟ್ಟಿತ್ತು. ದುರಸ್ತಿಯ ನಂತರ ಆ ಸೇತುವೆ ಮೇಲೆ ಭಾರಿ ವಾಹನಗಳ ಸಂಚಾರ ನಿಷೇಧಿಸಲಾಗಿದೆ. ರಾತ್ರಿ 9ರ ನಂತರ ಲಘು ವಾಹನಗಳ ಸಂಚಾರಕ್ಕೂ ಅವಕಾಶ ನೀಡುತ್ತಿಲ್ಲ. ಹಾಗಾಗಿ, ಹೊಸ ಸೇತುವೆ ಮೇಲೆ ವಾಹನಗಳ ದಟ್ಟಣೆ ಸಹಜವಾಗಿ ಅಧಿಕವಾಗುತ್ತದೆ. ವಾಹನಗಳು ಮುಖಾಮುಖಿಯಾಗುವ ಕಾರಣ ಅಪಘಾತ ಸಂಭವಿಸುತ್ತಿವೆ.ಫೆ.6ರ ರಾತ್ರಿ 8ರಿಂದ 9ರ ಮಧ್ಯೆಮೂರು ಅಪಘಾತಗಳು ಸಂಭವಿಸಿವೆ ಎಂದು ಆತಂಕ ವ್ಯಕ್ತಪಡಿಸಿದರು.

ADVERTISEMENT

ಸೇತುವೆ ಮೇಲೆ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕು. ಅಪಘಾತ ತಡೆಗೆ ಕ್ರಮ ಕೈಗೊಳ್ಳಬೇಕು. ಅಪಘಾತದಲ್ಲಿ ಮೃತಪಟ್ಟವರಿಗೆ ನೆರವು ನೀಡಬೇಕು ಎಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಹಾಪ್‌ಕಾಮ್ಸ್‌ ಅಧ್ಯಕ್ಷ ವಿಜಯಕುಮಾರ್, ಮುಖಂಡರಾದ ರಂಗಪ್ಪ, ಕೆ.ಗಣೇಶ್, ಕೃಷ್ಣಪ್ಪ, ನಾಗೇಶಯ್ಯ ಹಾಗೂ ಬೀರನಹಳ್ಳಿ ಚಂದ್ರಪ್ಪ, ಅರುಣ್ಮತ್ತಿತರರುಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.