ADVERTISEMENT

ನಾಲೆ ರಸ್ತೆಗೆ ಪುನೀತ್ ಹೆಸರು

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2021, 6:50 IST
Last Updated 2 ನವೆಂಬರ್ 2021, 6:50 IST
ಶಿವಮೊಗ್ಗ ಲಕ್ಷ್ಮೀ ಟಾಕೀಸ್ ಬಳಿಯ ನಾಲೆ ರಸ್ತೆಗೆ ‘ಪುನೀತ್ ರಾಜಕುಮಾರ್ ರಸ್ತೆ’ ಎಂದು ನಾಮಕರಣ ಮಾಡಿರುವುದು
ಶಿವಮೊಗ್ಗ ಲಕ್ಷ್ಮೀ ಟಾಕೀಸ್ ಬಳಿಯ ನಾಲೆ ರಸ್ತೆಗೆ ‘ಪುನೀತ್ ರಾಜಕುಮಾರ್ ರಸ್ತೆ’ ಎಂದು ನಾಮಕರಣ ಮಾಡಿರುವುದು   

ಶಿವಮೊಗ್ಗ: ನಗರದ ಲಕ್ಷ್ಮೀ ಟಾಕೀಸ್ ಬಳಿಯ ನಾಲೆ ರಸ್ತೆಗೆ ‘ಪುನೀತ್ ರಾಜ್‌ಕುಮಾರ್ ರಸ್ತೆ’ ಎಂದು ನಾಮಕರಣ ಮಾಡಲಾಗಿದೆ.

ಅಕಾಲಿಕ ಮರಣ ಹೊಂದಿದ ಪುನೀತ್‌ ರಾಜ್‌ಕುಮಾರ್‌ ನೆನಪಿಗೆ ಸಾರ್ವಜನಿಕರೇ ಸೇರಿ ‘ಪುನೀತ್ ರಾಜ್‌ಕುಮಾರ್ ರಸ್ತೆ’ ಎಂಬ ನಾಮಫಲಕ ಇಟ್ಟು ಉದ್ಘಾಟಿಸಿದ್ದಾರೆ. ಈ ಹೆಸರನ್ನು ಅಧಿಕೃತಗೊಳಿಸಲು ಮಹಾನಗರ ಪಾಲಿಕೆಯನ್ನು ಒತ್ತಾಯಿಸಿದ್ದಾರೆ.

ಸ್ಥಳೀಯ ಮುಖಂಡರಾದ ಜ್ಯೋತಿ ಅರಳಪ್ಪ, ಪ್ರಜಾಕೀಯ ವೆಂಕಟೇಶ್, ನರಸಿಂಹ ಗಂಧದಮನೆ, ಹರೀಶ್, ಸಿದ್ದರಾಜ್ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.