ರಿಪ್ಪನ್‌ಪೇಟೆ: ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮದಲ್ಲಿ ಗುರುವಾರ ಮಳೆಯ ಸಿಂಚನವಾಗಿದೆ.
ವಾರದಿಂದ ಮೋಡ ಕವಿದ ವಾತಾವರಣ ಇತ್ತು. ಸಂಜೆ ವೇಳೆಗೆ ಸುಮಾರು 30 ನಿಮಿಷಗಳ ಕಾಲ ಗುಡುಗು ಸಹಿತ ಮಳೆ ಸುರಿದು ಧರೆಯನ್ನು ತಂಪಾಗಿಸಿತು.
ಸಮೀಪದ ಹೆದ್ದಾರಿಪುರ, ಅಮೃತ, ಬೆಳ್ಳೂರು, ಕೆಂಚನಾಲ, ಅರಸಾಳು, ಬಾಳೂರು ಹಾಗೂ ಚಿಕ್ಕಜೇನಿ ವ್ಯಾಪ್ತಿಯಲ್ಲಿ ಈ ಅವಧಿಯಲ್ಲಿ ಮೊದಲ ಮಳೆಯಾಗಿದೆ. ಆದರೆ, ಬಿರುಬಿಸಿಲಿನ ನಡುವೆ ಮಳೆಯಾಗಿರುವುದು ಹೂವು-ಕಾಯಿ ಕಟ್ಟುವ ಬೆಳೆಗಳಾದ ಅಡಿಕೆ, ಮಾವು, ಗೇರು ಸೇರಿದಂತೆ ಇತರೆ ಫಸಲಿಗೂ ಹಾನಿಯುಂಟಾಗುತ್ತದೆ ರೈತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.