ADVERTISEMENT

ಕಟ್ಟಡ ಕಾರ್ಮಿಕರಿಗೆ ಹರ‍್ಯಾಣ ಮಾದರಿ ಪ್ಯಾಕೇಜ್

ರಾಜೀವ್ ಗಾಂಧಿ ಜಿಲ್ಲಾ ಕಟ್ಟಡ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಎನ್.ರಮೇಶ್ ಆಗ್ರಹ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2020, 14:07 IST
Last Updated 15 ಏಪ್ರಿಲ್ 2020, 14:07 IST
ಕಟ್ಟಡ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಎನ್.ರಮೇಶ್
ಕಟ್ಟಡ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಎನ್.ರಮೇಶ್   

ಶಿವಮೊಗ್ಗ: ಕೊರೊನಾ ಸಂಕಷ್ಟದ ಸಮಯದಲ್ಲಿಕಟ್ಟಡ ಕಾರ್ಮಿಕರಿಗೆ ಹರ‍್ಯಾಣ ಮಾದರಿ ಪ್ಯಾಕೇಜ್ ನೀಡಬೇಕು ಎಂದುರಾಜೀವ್ ಗಾಂಧಿ ಜಿಲ್ಲಾ ಕಟ್ಟಡ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದಪ್ರಧಾನ ಕಾರ್ಯದರ್ಶಿ ಎನ್.ರಮೇಶ್ ಆಗ್ರಹಿಸಿದರು.

ಕಟ್ಟಡ ಕಾರ್ಮಿಕರಿಗೆಹರ‍್ಯಾಣ ಸರ್ಕಾರ ವಾರಕ್ಕೆ₹1 ಸಾವಿರ ನೆರವು ನೀಡುತ್ತಿದೆ. ಬೆಂಗಳೂರಿನಲ್ಲಿ ಎರಡು ಊಟದ ಸೌಲಭ್ಯ ಕಲ್ಪಿಸಲಾಗಿದೆ. ಆದರೆ, ಜಿಲ್ಲೆಯಲ್ಲಿ ಯಾವ ಸೌಲಭ್ಯವೂ ಇಲ್ಲ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

ಕೆಲಸವಿಲ್ಲದೇ, ಕಟ್ಟಡ ಕಾರ್ಮಿಕರು ತುಂಬಾ ಸಂಕಷ್ಟ ಅನುಭವಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಸುಮಾರು 65 ಸಾವಿರ ಕಟ್ಟಡ ಕಾರ್ಮಿಕರಿದ್ದಾರೆ. ಅದರಲ್ಲಿ ಕೇವಲ 30 ಸಾವಿರ ಕಾರ್ಮಿಕರು ಗುರುತಿನ ಪತ್ರ ಪಡೆದಿದ್ದಾರೆ. 30 ಸಾವಿರ ಜನರು ಕಾರ್ಡ್ ಹೊಂದಿಲ್ಲ. ಸೌಲಭ್ಯಪಡೆಯಲು ಕಾರ್ಮಿಕ ಇಲಾಖೆ ಕಾರ್ಡ್ ನೀಡಬೇಕು. ನವೀಕರಣಕ್ಕೆ ಅವಕಾಶ ನೀಡಬೇಕು.ರಾಜ್ಯ ಸರ್ಕಾರ ತಕ್ಷಣವೇ ಅವರ ನೆರವಿಗೆ ನಿಲ್ಲಬೇಕು,ಎಲ್ಲಾ ಕಾರ್ಮಿಕರಿಗೂ ಸೌಲಭ್ಯ ನೀಡಬೇಕುಎಂದು ಒತ್ತಾಯಿಸಿದರು.

ADVERTISEMENT

ರಾಜ್ಯ ಸರ್ಕಾರ ಕಟ್ಟಡ ಕಾರ್ಮಿಕರಿಗೆ ₹ 2 ಸಾವಿರನೆರವುನೀಡುವ ಭರವಸೆ ನೀಡಿದೆ. ಕೆಲವರ ಖಾತೆಗೆ ಮೊದಲ ಹಂತ ₹1 ಸಾವಿರ ಜಮೆಯಾಗಿದೆ. ಉಳಿದವರಿಗೇ ಆ ಹಣವೂ ಬಂದಿಲ್ಲ. ಮೊದಲ ಕಂತು ₹1ಸಾವಿರ ಜಮೆ ಮಾಡುವ ಜತೆಗೆ, ಎರಡನೇ ಕಂತನ್ನೂ ತಕ್ಷಣ ಬಿಡುಗಡೆ ಮಾಡಬೇಕು.ಕಟ್ಟಡ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿ ಸೆಸ್ ಮೂಲಕ ಸುಮಾರು ₹10 ಸಾವಿರ ಕೋಟಿ ಸಂಗ್ರಹಿಸಿದೆ.ಸರ್ಕಾರದ ಆ ಹಣ ನೆರವಿಗಾಗಿ ಬಳಸಿಕೊಳ್ಳಬೇಕು.ರಾಜ್ಯ ಕಾರ್ಮಿಕ ಇಲಾಖೆ ಆನ್‌ಲೈನ್ ವ್ಯವಸ್ಥೆ ಕಲ್ಪಿಸುತ್ತಿರುವ ಕಾರಣತಡವಾಗುತ್ತಿದೆ. ಅದರ ಬದಲು ಜಿಲ್ಲಾಮಟ್ಟದಲ್ಲೇಕಾರ್ಮಿಕ ಇಲಾಖೆ ಹಣ ಸಂದಾಯ ಮಾಡಲುಅವಕಾಶನೀಡಬೇಕು.ಈಗಾಗಲೇ ಮದುವೆ, ಶಿಕ್ಷಣ, ಚಿಕಿತ್ಸೆ ಹೀಗೆಹಲವುರೀತಿಯಿಂದ ಕಾರ್ಮಿಕರಿಗೆ ಬರಬೇಕಾದ ನೆರವಿನ ಹಣ 3 ತಿಂಗಳಾದರೂ ಬಂದಿಲ್ಲ. ಈ ಹಣವೇ ಸುಮಾರು ₹2 ಕೋಟಿಇದೆ.ತಕ್ಷಣ ಹಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಶಿವಮೊಗ್ಗ ಜಿಲ್ಲೆಯಲ್ಲೂ ಬೇರೆ ರಾಜ್ಯಗಳಿಂದ ಬಂದ ಕಟ್ಟಡ ಕಾರ್ಮಿಕರು ಇದ್ದಾರೆ. ಲಾಕ್‌ಡೌನ್ ಸಮಯದಲ್ಲಿ ಅವರು ಹೊರ ಹೋಗಲು ಆಗುತ್ತಿಲ್ಲ. ಇಲ್ಲಿ ಕೆಲಸವೂ ಇಲ್ಲದೇ ಕಂಗಾಲಾಗಿದ್ದಾರೆ. ಅವರಿಗೂಸೂಕ್ತವ್ಯವಸ್ಥೆ ಮಾಡಬೇಕು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಂಘಟನೆ ಮುಖಂಡರಾದ ಮುಜೀಬ್, ಚಂದ್ರಶೇಖರ್, ರಮೇಶ್, ರಾಮು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.