ADVERTISEMENT

ಎಂಎಸ್ಸಿ ಕೆಮಿಸ್ಟ್ರಿ: ಅರ್ಪಿತಾಗೆ ಮೊದಲ ರ‍್ಯಾಂಕ್

ಮೊದಲ ಐದು ರ‍್ಯಾಂಕ್‌ಗಳು ಶಂಕರಘಟ್ಟ ಸ್ನಾತಕೋತ್ತರ ವಿಭಾಗದ ಪಾಲು

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2024, 14:28 IST
Last Updated 13 ಆಗಸ್ಟ್ 2024, 14:28 IST
ಆರ್.ಅರ್ಪಿತಾ
ಆರ್.ಅರ್ಪಿತಾ   

ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದ ಎಂಎಸ್ಸಿ ರಸಾಯನ ವಿಜ್ಞಾನ ವಿಭಾಗದ ಪರೀಕ್ಷೆಯಲ್ಲಿ ಶಿವಮೊಗ್ಗದ ಆರ್.ಅರ್ಪಿತಾ ಮೊದಲ ರ‍್ಯಾಂಕ್ ಪಡೆದಿದ್ದಾರೆ.

ನಗರದ ನಿವಾಸಿ ಕೆ.ಆರ್.ರಾಮು ಹಾಗೂ ಟಿ.ಎನ್.ಆಶಾ ದಂಪತಿ ಪುತ್ರಿ ಅರ್ಪಿತಾ ಶೇ 82.8 ಅಂಕಗಳೊಂದಿಗೆ ಮೊದಲ ರ‍್ಯಾಂಕ್ ತಮ್ಮದಾಗಿಸಿಕೊಂಡಿದ್ದಾರೆ.

ಎಂಎಸ್ಸಿ ರಸಾಯನ ವಿಜ್ಞಾನ ವಿಷಯದಲ್ಲಿ ಮೊದಲ 10 ರ‍್ಯಾಂಕ್‌ಗಳ ಪೈಕಿ ಐದು ಸ್ಥಾನಗಳನ್ನು ಶಂಕರಘಟ್ಟದ ಕುವೆಂಪು ವಿಶ್ವವಿದ್ಯಾಲಯ ರಸಾಯನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಪಡೆದಿದ್ದಾರೆ.

ADVERTISEMENT

ಕ್ರಮವಾಗಿ ಆರ್.ಅರ್ಪಿತಾ, ಬಿ.ಟಿ.ತೇಜಸ್ವಿನಿ, ಜೆ.ಯು.ಅರ್ಪಿತಾ, ನಾಝಿಯಾ ಫಿರ್ದೋಸ್ ಹಾಗೂ ಎಂ.ಎ.ಸ್ನೇಹಾ ಮೊದಲ ಐದು ರ‍್ಯಾಂಕ್‌ಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.