ಶಿವಮೊಗ್ಗ: ಸೋಗಾನೆ ಗ್ರಾಮದ ಸುತ್ತಮುತ್ತಇರುವ ಸರ್ವೆ ನಂಬರ್ 120ರ ಭೂ ಸ್ವಾಧೀನ ಕೈಬಿಟ್ಟು ನ್ಯಾಯಾಲಯದ ಆದೇಶದಂತೆ 50, 53ರಲ್ಲಿ ಬಗರ್‌ಹುಕುಂ ಸಕ್ರಮಕ್ಕಾಗಿ ಅರ್ಜಿ ಸಲ್ಲಿಸಿದವರಿಗೆಹಕ್ಕುಪತ್ರ ನೀಡುವಂತೆ ಭೂಮಿ ಹಕ್ಕು ರೈತರ ಹೋರಾಟ ಸಮಿತಿ ಸದಸ್ಯರು ಸೋಮವಾರ ಸಂಸದ ರಾಘವೇಂದ್ರ ಅವರ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು.
ಈಗಾಗಲೇ ಸೋಗಾನೆಬಳಿ ವಿಮಾನ ನಿಲ್ದಾಣಕ್ಕಾಗಿ ರೈತರು ಭೂಮಿ ತ್ಯಾಗ ಮಾಡಿದ್ಧಾರೆ. ಈಗ ಮತ್ತೆ ಭೂಮಿ ವಶಪಡಿಸಿಕೊಳ್ಳುತ್ತಿರುವ ಪರಿಣಾಮ ರೈತರು ಆತಂಕಕ್ಕೆ ಒಳಗಾಗಿದ್ದಾರೆ.ಈ ಹಿಂದೆ ನಿಲ್ದಾಣಕ್ಕಾಗಿ ಭೂಮಿ ನೀಡಿದ ರೈತರ ಜೀವನ ಬೀದಿಗೆ ಬಂದಿದೆ.ಹಿಂದೆ ನೀಡಿದ್ದ ಭರವಸೆಗಳೂ ಈಡೇರಿಲ್ಲ ಎಂದು ಆರೋಪಿಸಿದರು.
ಜಮೀನು ನೀಡಿದ ರೈತರಿಗೆ ನಿವೇಶನಗಳನ್ನುನೀಡುವ ಭರವಸೆ ನೀಡಲಾಗಿತ್ತು. ಆ ಭರವಸೆಗಳು ಹುಸಿಯಾಗಿವೆ. ರೈತರು40-50 ವರ್ಷಗಳಿಂದಇಲ್ಲಿ ಸಾಗುವಳಿ ಮಾಡಿಕೊಂಡು ಬರುತ್ತಿದ್ದಾರೆ. ಅವರನ್ನುಒಕ್ಕಲೆಬ್ಬಿಸಬಾರದು. ನ್ಯಾಯಾಲಯದ ಆದೇಶ ಗೌರವಿಸಬೇಕುಎಂದು ಕೋರಿದರು.
ಎಂ.ಬಿ.ಕೃಷ್ಣಪ್ಪ, ಮಹಾದೇವ್, ಎಂ.ಎಚ್.ಕಾಳರಾಯ, ಎಸ್.ಬಿ.ಶಿವಕುಮಾರ್, ಮಂಜುನಾಥ, ಉಮೇಶ್, ಶೇಖರ್, ರಾಮಕ್ಕಮನವಿ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.