ADVERTISEMENT

ವಿಮರ್ಶೆಗಳಿಗೆ ಒಳಪಡಿಸಿದಾಗ ಕೃತಿಗೆ ಹೆಚ್ಚಿನ ಮೌಲ್ಯ

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಬಿ.ಶಂಕರಪ್ಪ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2020, 20:15 IST
Last Updated 21 ಫೆಬ್ರುವರಿ 2020, 20:15 IST
ಶಿವಮೊಗ್ಗದಲ್ಲಿ ಶುಕ್ರವಾರ ವಿಶ್ವ ಮಾತೃಭಾಷಾ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ  ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಬಿ.ಶಂಕರಪ್ಪ ಮಾತನಾಡಿದರು.
ಶಿವಮೊಗ್ಗದಲ್ಲಿ ಶುಕ್ರವಾರ ವಿಶ್ವ ಮಾತೃಭಾಷಾ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ  ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಬಿ.ಶಂಕರಪ್ಪ ಮಾತನಾಡಿದರು.   

ಶಿವಮೊಗ್ಗ:ಯಾವುದೇ ಲೇಖಕರ ಕೃತಿಗಳನ್ನುಮೌಲ್ಯಮಾಪನ, ವಿಮರ್ಶೆಗೆ ಒಳಪಡಿಸಿದಾಗ ಬರಹದ ನೈಜ ಮೌಲ್ಯ ಅನಾವರಣಗೊಳ್ಳುತ್ತದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಬಿ.ಶಂಕರಪ್ಪ ಪ್ರತಿಪಾದಿಸಿದರು.

ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ‘ವಿಶ್ವ ಮಾತೃಭಾಷಾ ದಿನಾಚರಣೆ’ ಪ್ರಯುಕ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿಶಿಕ್ಷಕ ಮಂಜಪ್ಪ ಅವರ 'ವೃತ್ತಿರಥ’ ಕಿರು ಹೊತ್ತಿಗೆ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಕೃತಿಯ ಉತ್ತಮ ಅಂಶಗಳ ಜತೆಗೆ, ಲೋಪಗಳನ್ನೂ ಬೆಳಕಿಗೆ ತರಬೇಕು. ಆಗ ಯುಪೀಳಿಗೆ ಮೌಲ್ಯಯುತ ಪುಸ್ತಕ ಬರೆಯಲು ದಾರಿಯಾಗುತ್ತದೆ. ಸಾಕಷ್ಟು ಉತ್ತಮ ಕೃತಿಗಳು ಪ್ರಕಟಗೊಳ್ಳುತ್ತವೆ ಎಂದರು.

ADVERTISEMENT

ಕೇಂದ್ರ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಲಕ್ಷಾಂತರ ಪುಸ್ತಕಗಳು ದೂಳು ತಿನ್ನುತ್ತಿವೆ.ಇದುಓದುಗರ ಸಂಖ್ಯೆ ಕಡಿಮಾಯಾಗಿರುವ ಸೂಚನೆ.ಬರೆಯುವವರ ಸಂಖ್ಯೆಯೂ ಕ್ಷೀಣಿಸಿದೆ ಎಂದು ಕಳವಳ ವ್ಯಕ್ತಪಡಿಸಿದರು.

ನಿವೃತ್ತ ಪ್ರಾಂಶುಪಾಲ ಎಸ್‌.ರಂಗನಾಥಯ್ಯಕೃತಿ ಅವಲೋಕನ ಮಾಡಿದರು.ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ಅಧ್ಯಕ್ಷ ಜಿ.ಪಿ.ಸಂಪತ್ ಕುಮಾರ್‌ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿಗಳಾದ ಚನ್ನಬಸಪ್ಪ ನ್ಯಾಮತಿ, ಜಿ.ಎಸ್.ಅನಂತ ಉಪಸ್ಥಿತರಿದ್ದರು.

ನಂತರ ನಡೆದ ಕವಿಗೋಷ್ಠಿಯಲ್ಲಿಜಿ.ಎಸ್‌.ಸರೋಜಾ,ಗೊಪಜ್ಜಿ ನಾಗಪ್ಪ, ಸುನೀತ ರಾವ್, ಉರ್ಮಿಳಾ ರಾವ್‌,ಶ್ರೀರಂಜನಿ ದತ್ತಾತ್ರಿ, ಎನ್‌.ಆರ್.ಮಂಜುಳಾ, ನಾಗರಾಜ್ ಬಿ, ಹಸನ್ ಬೆಳ್ಳಿಗನೂಡು, ಅನ್ನಪೂರ್ಣ ರಾನಡೆ, ಜೆ.ವಿ.ನಾಗರತ್ನಾ,ಸರಸ್ವತಿ, ಶಾಲಿನಿ ರಾಮಸ್ವಾಮಿ, ಪ್ರಣವ್ ಗೊಗಾಟೆ, ಮಮತಾ ಎಸ್ ಹೆಗ್ಡೆ, ಐಶ್ವರ್ಯ ರಾಣಿ, ಮಹಮದ್‌ ಗೌಸ್, ರಾಮುಎನ್‌.ರಾಥೋಡ್, ಈಶ್ವರಪ್ಪ, ಡಾ ಎಸ್‌.ಎಂ.ಮಹೇಶ್ವರಮೂರ್ತಿ, ಲಲಿತಾ, ತನುಜಾ ಸುರೇಶ್, ಮಂಜುನಾಥ ಗೊರಟ್ಟಿ, ಜಿ.ಎಸ್.ಅಶೋಕ್, ಬಸವರಾಜು, ಸಾವಿತ್ರಮ್ಮ ಕವನವಾಚನ ಮಾಡಿದರು.

ಸಾಹಿತಿಗಳಾದ ಡಾ.ಎಚ್ ಎಸ್ ರುದ್ರೇಶ್, ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.