ADVERTISEMENT

ಧರೆಗುರುಳಿದ ಬೃಂದಾವನ ಡ್ರೈಯರ್ಸ್ ರೈಸ್‌ಮಿಲ್

​ಪ್ರಜಾವಾಣಿ ವಾರ್ತೆ
Published 11 ಜುಲೈ 2022, 2:37 IST
Last Updated 11 ಜುಲೈ 2022, 2:37 IST
ಕಾರ್ಗಲ್ ಪಟ್ಟಣದ ಶರಾವತಿ ನದಿ ತೀರದಲ್ಲಿದ್ದ ಬೃಂದಾವನ ಡ್ರೈಯರ್ಸ್ ರೈಸ್‌ಮಿಲ್ ಭಾನುವಾರ ಧರೆಗುರುಳಿದೆ
ಕಾರ್ಗಲ್ ಪಟ್ಟಣದ ಶರಾವತಿ ನದಿ ತೀರದಲ್ಲಿದ್ದ ಬೃಂದಾವನ ಡ್ರೈಯರ್ಸ್ ರೈಸ್‌ಮಿಲ್ ಭಾನುವಾರ ಧರೆಗುರುಳಿದೆ   

ಕಾರ್ಗಲ್: ಶರಾವತಿ ಕಣಿವೆ ಪ್ರದೇಶದಲ್ಲಿ ನಿರಂತರವಾಗಿ ಸುರಿಯುತ್ತಿರುವ ಗಾಳಿ ಮಳೆಯ ರಭಸಕ್ಕೆ ಕಾರ್ಗಲ್ ಪಟ್ಟಣದ ಶರಾವತಿ ನದಿ ತೀರದಲ್ಲಿದ್ದ ಬೃಂದಾವನ ಡ್ರೈಯರ್ಸ್ ರೈಸ್‌ಮಿಲ್ ಭಾನುವಾರ ಧರೆಗುರುಳಿದೆ.

ಶನಿವಾರ ರಾತ್ರಿ ವೇಳೆಯಲ್ಲಿ ಗುಡುಗು ಸಿಡಿಲು ಸಹಿತ ನಿರಂತರವಾಗಿ ಸುರಿಯುತ್ತಿದ್ದ ಗಾಳಿ ಮಳೆಯ ರಭಸಕ್ಕೆ ಬೃಂದಾವನ ಡ್ರೈಯರ್ಸ್‍ನ 80 ಅಡಿ ಎತ್ತರದ ಗೋಡೆ ಸಂಪೂರ್ಣವಾಗಿ ಸೂರು ಸಹಿತ ಧರೆಗುರುಳಿದೆ.

ರೈಸ್‌ಮಿಲ್ ಒಳಭಾಗದಲ್ಲಿದ್ದ ಸಾವಿರಕ್ಕೂ ಅಧಿಕ ಭತ್ತದ ಮೂಟೆಗಳು ಮಳೆ ನೀರು ಪಾಲಾಗಿದ್ದು, ಯಂತ್ರೋಪಕರಣಗಳು, ಜನರೇಟರ್ ಕೊಠಡಿ ಸಹಿತ ಧರೆಗುರುಳಿದ್ದು, ₹ 1 ಕೋಟಿಗೂ ಹೆಚ್ಚು ನಷ್ಟ ಸಂಭವಿಸಿದೆ ಎಂದು ರೈಸ್‌ಮಿಲ್ ಮಾಲೀಕ ವಿನೋದ ಸುಭಾಸ್ ಮಹಾಲೆ ತಿಳಿಸಿದ್ದಾರೆ.

ADVERTISEMENT

ನೂರಾರು ಕಾರ್ಮಿಕರು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದರು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಸ್ಥಳಕ್ಕೆ ಸಾಗರ ತಹಶೀಲ್ದಾರ್ಮಲ್ಲೇಶ್ ಬಿ.ಪೂಜಾರ್ ಮತ್ತು ಸಬ್ಇನ್‌ಸ್ಪೆಕ್ಟರ್ ತಿರುಮಲೇಶ್ ಭೇಟಿ ನೀಡಿ
ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಮಾರ್ಗ ಸೂಚಿಗಳನ್ನು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.