ರಿಪ್ಪನ್‌ಪೇಟೆ: ಗ್ರಾಮೀಣ ಭಾಗದಲ್ಲಿ ದಿನದ 24 ಗಂಟೆಗಳ ಪೈಕಿ ಕೇವಲ ಎರಡು ಗಂಟೆ ನೆಟ್ವರ್ಕ್ ಸಿಗುವುದೂ ಕಷ್ಟ ಸಾಧ್ಯವಾಗಿದೆ. ಮನೆಯಿಂದ ಕೆಲಸ ನಿರ್ವಹಿಸುತ್ತಿರುವ ನೌಕರರು ಹಾಗೂ ವಾರ್ಷಿಕ ಪರೀಕ್ಷೆಗಳು ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
‘ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಸಂಸ್ಥೆ ದುಃಸ್ಥಿತಿಗೆ ಇಳಿದಿದ್ದರೆ, ಖಾಸಗಿ ಕಂಪನಿಗಳು ಪೈಪೋಟಿಗೆ ಇಳಿದು ಸೇವೆಯ ಉತ್ಕೃಷ್ಟತೆಯನ್ನು ಹೆಚ್ಚಿಸಿಕೊಂಡು ದುಪ್ಪಟ್ಟು ದರ ವಿಧಿಸಿ, ಸಾರ್ವಜನಿಕರ ಸುಲಿಗಿಗೆ ಮುಂದಾಗಿವೆ’ ಎಂದು ಉದ್ಯಮಿ ರಾಜಾರಾಮ್ ಬಾಳಿಗಾ ಆರೋಪಿಸಿದ್ದಾರೆ.
‘15 ದಿನಗಳಲ್ಲಿ ಜನಪ್ರತಿನಿಧಿಗಳು ಬಿಎಸ್ಎನ್ಎಲ್ ಸಮಸ್ಯೆಯ ಕುರಿತು ಅವಲೋಕನ ನಡೆಸಿ, ಗ್ರಾಹಕರ ಹಿತ ಕಾಯುವ ನಿಟ್ಟಿನಲ್ಲಿ ಗಮನ ಹರಿಸಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ಹಾಗೂ ಯುವ ಮುಖಂಡ ಶ್ರೀನಿವಾಸ್ ಆಚಾರ್ ಆಗ್ರಹಿಸಿದ್ದಾರೆ.
ಸಮಸ್ಯೆ ಪರಿಹರಿಸಲು ಮುಂದಾಗದಿದ್ದರೆ ರಿಪ್ಪನ್‌ಪೇಟೆ ಬಿಎಸ್ಎನ್ಎಲ್ ಕಚೇರಿಯಿಂದಯಿಂದ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿವರೆಗೆ ವಿವಿಧ ಸಂಘ ಸಂಸ್ಥೆಗಳ ಹಾಗೂ ಸಾಮಾಜಿಕ ಸಂಘಟನೆಗಳ ಸಹಯೋಗದಲ್ಲಿ ಕಾಲ್ನಡಿಗೆ ಮೂಲಕ ಬಿಎಸ್ಎನ್ಎಲ್ ಅಣಕು ಶವಯಾತ್ರೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.