ADVERTISEMENT

ಸಾಗರ | ದೊಣ್ಣೆಯಿಂದ ಹೊಡೆದು ಹತ್ಯೆ ಪ್ರಕರಣ: ಅಪರಾಧಿಗೆ 4 ವರ್ಷ ಜೈಲು ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2025, 3:58 IST
Last Updated 27 ಡಿಸೆಂಬರ್ 2025, 3:58 IST
<div class="paragraphs"><p>ಜೈಲು (ಪ್ರಾತಿನಿಧಿಕ ಚಿತ್ರ)</p></div>

ಜೈಲು (ಪ್ರಾತಿನಿಧಿಕ ಚಿತ್ರ)

   

ಸಾಗರ: ಮೊಬೈಲ್ ಚಾರ್ಜ್ ಹಾಕಲು ಮನೆಯಲ್ಲಿ ಅವಕಾಶ ಕೊಡಲಿಲ್ಲ ಎನ್ನುವ ಕಾರಣಕ್ಕೆ ಮನೆಯ ಮಾಲೀಕನ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಲಯ ತಾಲ್ಲೂಕಿನ ಮುರಳ್ಳಿ, ಮರಾಠಿ ಗ್ರಾಮದ ಸಿದ್ದಪ್ಪ ಎಂಬಾತನಿಗೆ ನಾಲ್ಕು ವರ್ಷ ಜೈಲು ಶಿಕ್ಷೆ, ₹ 15 ಸಾವಿರ ದಂಡ ವಿಧಿಸಿದೆ.

ಸಿದ್ದಪ್ಪನ ಮನೆಯಲ್ಲಿ ವಿದ್ಯುತ್ ಸೌಲಭ್ಯವಿಲ್ಲದ ಕಾರಣ ಗ್ರಾಮದ ಇತರರ ಮನೆಗೆ ಮೊಬೈಲ್ ಚಾರ್ಜ್ ಮಾಡಲು ತೆರಳುತ್ತಿದ್ದ. 2022 ರ  ನ. 9 ರಂದು ತಿಮ್ಮಪ್ಪ ಎಂಬುವವರ ಮನೆಗೆ ಹೋದಾಗ ಮೊಬೈಲ್ ಚಾರ್ಜ್ ಮಾಡಲು ಅವಕಾಶ ನೀಡದಿದ್ದಕ್ಕೆ ತಿಮ್ಮಪ್ಪ ಅವರ ಮೇಲೆ ಸಿದ್ದಪ್ಪ ದೊಣ್ಣೆಯಿಂದ ಹಲ್ಲೆ ನಡೆಸಿದಾಗ ಅವರು ಮೃತಪಟ್ಟಿದ್ದರು.

ADVERTISEMENT

ಈ ಸಂಬಂಧ ಕಾರ್ಗಲ್ ಠಾಣೆ ಪೊಲೀಸರು ಸಿದ್ದಪ್ಪ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಆರ್. ರವೀಂದ್ರ ಸಿದ್ದಪ್ಪಗೆ ಶುಕ್ರವಾರ ಶಿಕ್ಷೆ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಅಣ್ಣಪ್ಪ ಎಂ.ನಾಯ್ಕ್ ವಾದಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.