ಸಾಗರ: ಇಲ್ಲಿನ ಸುಭಾಷ್ ನಗರ ಬಡಾವಣೆಯ ರಸ್ತೆ ಬದಿಯಲ್ಲಿ ನಯನಾ ನಾರಾಯಣ್ ಎಂಬುವವರಿಗೆ ಈಚೆಗೆ ಮಾಂಗಲ್ಯ ಸರವೊಂದು ದೊರಕಿತ್ತು. ನಯನಾ ಅವರು ಸರವನ್ನು ಡಿವೈಎಸ್‌ಪಿ ಕಚೇರಿಗೆ ತಲುಪಿಸಿದ್ದರು.
ಜೆಪಿ ನಗರ ನಿವಾಸಿ ಚಂದ್ರಕಲಾ ಎಂಬುವವರು ಮಾಂಗಲ್ಯ ಸರವನ್ನು ಕಳೆದುಕೊಂಡಿದ್ದರು. ನಂತರ ಪೊಲೀಸರು ಚಂದ್ರಕಲಾ ಅವರಿಗೆ ಸರವನ್ನು ನೀಡಿದರು. ಪ್ರಾಮಾಣಿಕತೆಯಿಂದ ಸರವನ್ನು ಪೊಲೀಸರಿಗೆ ತಲುಪಿಸಿದ ನಯನಾ ಅವರಿಗೆ ಬುಧವಾರ ಎಎಸ್‌ಪಿ ಬೆನಕ ಪ್ರಸಾದ್ ಅಭಿನಂದನಾ ಪತ್ರ ನೀಡಿ ಗೌರವಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.