ಸಾಗರ: ಸಾಮರಸ್ಯದ ಮೂಲಕ ಜಗತ್ತಿನಲ್ಲಿ ಶಾಂತಿ ನೆಲೆಸಬೇಕು ಎಂಬ ಮುಹ್ಮದ್ ಪೈಗಂಬರರ ಸಂದೇಶ ಎಂದಿಗೂ ಪ್ರಸ್ತುತ ಎಂದು ಧರ್ಮಗುರು ಸಿನಾನ್ ಸುಲ್ತಾನಿ ಹೇಳಿದರು.
ಇಲ್ಲಿನ ಬದರ್ ಜುಮಾ ಮಸೀದಿ ಆಶ್ರಯದಲ್ಲಿ ಕೆಎಂಜೆ, ಎಸ್‌ವೈಎಸ್, ಎಸ್‌ಎಸ್‌ಎಫ್ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಈದ್ ಮಿಲಾದ್ ಸಂದೇಶ ಸಾರುವ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರವಾದಿ ಮುಹ್ಮದ್ ಪೈಗಂಬರರು ಸರಳತೆಗೆ ಒತ್ತು ನೀಡಿದ್ದಾರೆ. ಈ ಕಾರಣ ಧ್ವನಿವರ್ಧಕ, ಘೋಷಣೆ ಇಲ್ಲದೆ ಅವರ ಸಂದೇಶವನ್ನು ಸಾದರಪಡಿಸುವ ಜೊತೆಗೆ ಇಸ್ಲಾಂ ಕುರಿತು ಜನರಲ್ಲಿರುವ ತಪ್ಪು ಭಾವನೆಯನ್ನು ಹೋಗಲಾಡಿಸಲು ಶಾಂತಿ ಮೆರವಣಿಗೆ ಆಯೋಜಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಧರ್ಮಗುರು ಅಬ್ದುಲ್ ಕಲಂ ಸಅದಿ ಧ್ವಜಾರೋಹಣ ನೆರವೇರಿಸಿದರು. ಪ್ರಮುಖರಾದ ಶಿಹಾಬ್ ತಂಗಲ್, ಶಾಕೀರ್ ಸಖಾಫಿ, ಆಸೀಫ್ ಸಖಾಫಿ, ಮುಹ್ಮದ್ ಅಲಿ ಮದನಿ, ಅಬ್ಬಾಸ್ ಉಸ್ತಾದ್, ನವಾಜದ್ ಅಹ್ವನಿ, ಯೂನೂಸ್, ಮನ್ಸೂಕ್ ಹಿಕಮಿ, ಕಬೀರ್ ಚಿಪ್ಪಳಿ, ಅಜೀಜ್, ಬಶೀರ್, ರಾಜೀಕ್, ಇಸ್ಮಾಯಿಲ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.