ಸಾಗರ: ‘ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಸಮಾಜದಲ್ಲಿ ಸಾಮರಸ್ಯ ನೆಲೆಸುತ್ತದೆ’ ಎಂದು ಗಣಪತಿ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಆರ್.ಶ್ರೀನಿವಾಸ್ ಮೇಸ್ತ್ರಿ ಹೇಳಿದರು.
ಇಲ್ಲಿನ ಗಾಂಧಿ ಮೈದಾನದಲ್ಲಿ ಶನಿವಾರ ನಡೆದ ಮಾಸ್ಟರ್ ಶಂಕರ್ ಕಲಾವೃಂದದ 35ನೇ ವಾರ್ಷಿಕೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಲೆ, ಸಾಹಿತ್ಯ, ಸಂಸ್ಕೃತಿಗೆ ಸಂಬಂಧಪಟ್ಟ ಕಾರ್ಯಕ್ರಮಗಳು ಒಂದು ಊರಿನ ಆರೋಗ್ಯವನ್ನು ಕಾಪಾಡುವ ಪರಿಕರಗಳಾಗಿವೆ ಎಂದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ 21 ಸಾಧಕರನ್ನು ಸನ್ಮಾನಿಸಲಾಯಿತು. ಹಿರಿಯ ಸಹಕಾರಿ ಮುಖಂಡ ಎಸ್.ಬಿ.ರಘುನಾಥ್ ಅಧ್ಯಕ್ಷತೆ ವಹಿಸಿದ್ದರು. ಸನ್ಮಾನಿತರನ್ನು ದೀಪಕ್ ಸಾಗರ್ ಪರಿಚಯಿಸಿದರು.
ಪ್ರಮುಖರಾದ ಕಲಸೆ ಚಂದ್ರಪ್ಪ, ಟಿ.ಡಿ.ಮೇಘರಾಜ್, ಕೆ.ಆರ್.ಗಣೇಶ್ ಪ್ರಸಾದ್, ರಾಜು ಬಿ.ಮಡಿವಾಳ, ಕೆ.ಸತೀಶ್, ವಿ.ಕೆ.ವಿಜಯಕುಮಾರ್, ಜಗದೀಶ್ ಕುರ್ಡೇಕರ್, ಬಣ್ಣದ ಬಾಬು, ನಾಗರಾಜ್, ಶಿವಮೂರ್ತಿ, ವಿ.ಶಂಕರ್ ಇದ್ದರು.
ಮಾಲತಿ ಪ್ರಾರ್ಥಿಸಿದರು. ಶಿಕ್ಷಕರ ಸಿಆರ್ ಪಿ ಬಳಗದವರು ನಾಡಗೀತೆ ಹಾಡಿದರು. ಅರುಣ್ ಕುಮಾರ್ ವಂದಿಸಿದರು. ಸಿ.ಪಿ.ಗಣೇಶ್ ನಿರೂಪಿಸಿದರು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.