
ಸಾಗರ: ರಂಜಾನ್ ತಿಂಗಳಿನಲ್ಲಿ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಒತ್ತಾಯಿಸಿ ಮುಸ್ಲಿಂ ಸಮುದಾಯದವರು ಗುರುವಾರ ಮೆಸ್ಕಾಂ ಕಚೇರಿಗೆ ಮನವಿ ಸಲ್ಲಿಸಿದರು.
‘ರಂಜಾನ್ ತಿಂಗಳಿನಲ್ಲಿ ಉಪವಾಸದ ಜೊತೆಗೆ ಹಲವು ಧಾರ್ಮಿಕ ಆಚರಣೆಗಳಲ್ಲಿ ಮುಸ್ಲಿಂ ಸಮುದಾಯದವರು ಪಾಲ್ಗೊಳ್ಳುತ್ತಾರೆ. ಎಲ್ಲ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಇರುತ್ತದೆ. ಇಂತಹ ಸಂದರ್ಭದಲ್ಲಿ ವಿದ್ಯುತ್ ಕಡಿತಗೊಳಿಸುವುದರಿಂದ ಧಾರ್ಮಿಕ ಆಚರಣೆಗಳಿಗೆ ತೊಂದರೆಯಾಗುತ್ತದೆ’ ಎಂದು ಮನವಿಯಲ್ಲಿ ಹೇಳಲಾಗಿದೆ.
ಪ್ರಮುಖರಾದ ಮಹ್ಮದ್ ಜಿಕ್ರಿಯಾ, ಸೈಯದ್ ತಾಹೀರ್, ಅಜ್ಮತ್ ಆಲಿಖಾನ್, ಸದ್ದಾಂ ದೊಡ್ಮನೆ, ಅಕ್ಬರ್ ಖಾನ್, ಅಸ್ಲಾಂ, ಇರ್ಫಾನ್ , ರಶೀದ್, ಮೋಸಿನ್ ಆಲಿಖಾನ್, ಇಲಿಯಾಸ್, ಆಶಿಕ್, ಇಮ್ರಾನ್ ಖಾನ್, ಜಾಫರ್ ಇದ್ದರು.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಸ್ಲಿದಲ್ ಅಮೀನ್ ಶಾಫಿ ಜಮಾತ್ ವತಿಯಿಂದ ಮೆಸ್ಕಾಂ ಕಚೇರಿಗೆ ಪ್ರತ್ಯೇಕ ಮನವಿ ಸಲ್ಲಿಸಲಾಯಿತು. ಅಬ್ದುಲ್ ಖಾದರ್, ಅನ್ವರ್ ಭಾಷಾ, ರಫೀಕ್, ಶರೀಫ್, ನಾಸಿರ್, ವಸೀಂ ದೊಡ್ಮನೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.