ADVERTISEMENT

ಶಿವಮೊಗ್ಗ: ಜಿಲ್ಲೆಯ ಜನಮನ ಸೂರೆಗೊಂಡ ಸಹ್ಯಾದ್ರಿ ಉತ್ಸವ

ಮೊದಲ ದಿನವೇ ಭರ್ಜರಿ ಯಶಸ್ಸು, ಮೇರೆ ಮೀರಿದ ಜನೋತ್ಸಹ

​ಪ್ರಜಾವಾಣಿ ವಾರ್ತೆ
Published 24 ಜನವರಿ 2019, 12:52 IST
Last Updated 24 ಜನವರಿ 2019, 12:52 IST
ಸಹ್ಯಾದ್ರಿ ಉತ್ಸವದ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದ ಕವಯತ್ರಿಯರು.
ಸಹ್ಯಾದ್ರಿ ಉತ್ಸವದ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದ ಕವಯತ್ರಿಯರು.   

ಶಿವಮೊಗ್ಗ: ಜಿಲ್ಲೆಯಲ್ಲಿ ವ್ಯಾಪಿಸುತ್ತಿರುವ ಮಂಗನಕಾಯಿಲೆ ಕಾರಣಕ್ಕಾಗಿ ವ್ಯಕ್ತವಾದ ವರೋಧದ ಮಧ್ಯೆಯೂ ದಶಕದ ನಂತರ ಆರಂಭವಾದ ನಾಲ್ಕು ದಿನಗಳ ಸಹ್ಯಾದ್ರಿ ಉತ್ಸವ ಮೊದಲ ದಿನವೆ ಜನಾಕರ್ಷಣೆಯ ಕೇಂದ್ರವಾಗಿತ್ತು.

ಮೊದಲೇ ಮುಂಗಡ ಬುಕ್ಕಿಂಗ್ ಮಾಡಿದವರು ಬೆಳಿಗ್ಗೆ 7.30ಕ್ಕೆ ಕೆಎಸ್‌ಆರ್‌ಟಿಸಿ ಬಸ್‌ ಏರಿ ನಿಗದಿತ ಮಾರ್ಗಗಳಲ್ಲಿ ಪ್ರವಾಸ ಹೊರಟರು. ಶಿಕಾರಿಪುರ ಹುಚ್ಚರಾಯಸ್ವಾಮಿ ದೇವಸ್ಥಾನದಿಂದ ಸೈಕಲ್ ಏರಿದ ಪುರುಷರು ಶಿವಮೊಗ್ಗದವರೆಗೂ ಬಂದರು. 60 ದಾಟಿದವರೂ ಯುವಕರು ನಾಚಿಸುವಷ್ಟು ಲವಲವಿಕೆಯಿಂದ ಸೈಕಲ್‌ ತುಳಿದರು. ಸೂರಗೊಂಡನಕೊಪ್ಪದ ಸೇವಾಲಾಲ್ ದೇವಸ್ಥಾನದಿಂದ ಮಹಿಳೆಯರ ಸೈಕಲ್ ರೇಸ್‌ಗೆ ಚಾಲನೆ ನೀಡಲಾಯಿತು.

ನಿಧಿಗೆ ಕೆರೆಯಲ್ಲಿ ಆಯೋಜಿಸಿದ್ದ ವಾಟರ್ ಸ್ಪೋರ್ಟ್ಸ್ ನಲ್ಲಿ ಭಾಗವಹಿಸಿ ಬಗೆಬಗೆಯ ಜಲ ಸಾಹಸ ಪ್ರದರ್ಶಿಸಿದರು. ಗೋಂದಿಚಟ್ನಳ್ಳಿ ಬಳಿ ನಡೆದ ಕೆಲಸರು ಗದ್ದೆ ಓಟದ ಸ್ಪರ್ಧೆಯಲ್ಲಿ ಗ್ರಾಮೀಣ ಪ್ರದೇಶದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಮಹಿಳೆಯರು, ಮಕ್ಕಳೂ ಟಾಂಗಾ ಏರಿ ಊರು ಸುತ್ತಿದ್ದರು. ನವುಲೆ ಕ್ರೀಡಾಂಗಣದಲ್ಲಿ ನಡೆದ ಪ್ಯಾರಾಗ್ಲೈಡಿಂಗ್ ಸ್ಪರ್ಧೆಗಳಲ್ಲಿ ಭಾಗವಹಿಸಿ ಸಾಹಸ ಮೆರೆದರು.

ADVERTISEMENT

ಗಮನ ಸೆಳೆದ ಹೆಲಿಟೂರ್

ಸಾಗರ ರಸ್ತೆಯ ಸರ್ಕಿಟ್‌ಹೌಸ್‌ ಆವರಣದ ಹೆಲಿಪ್ಯಾಡ್ ಇಂದು ಜನರ ಆಕರ್ಷಣೆಯ ಪ್ರಮುಖ ಕೇಂದ್ರವಾಗಿತ್ತು. ಮೊದಲೇ ಬುಕ್ಕಿಂಗ್ ಮಾಡಿದವರಿಗೆ ಮೊದಲ ದಿನ ಆಗಸದಲ್ಲಿ ಹಾರಾಡುವ ಅವಕಾಶ ಒದಗಿಬಂದಿತ್ತು. ಹಲಿಕಾಪ್ಟರ್ ಏರಿ 8, 10 ನಿಮಿಷ ಆಗಸದಲ್ಲಿ ಹಾರಾಡುವ ಮೂಲಕ ಶಿವಮೊಗ್ಗ ನಗರದ ಸೊಬಗು ಕಣ್ತುಂಬಿಕೊಂಡರು.

ಸಿನಿಮೋತ್ಸವಕ್ಕೆ ಚಾಲನೆ:

ಶಿವಪ್ಪನಾಯಕ ಮಾರುಕಟ್ಟೆಯ ಬ್ಯಾರಿ ಸಿಟಿಸೆಂಟ್ರಲ್ ಮಾಲ್‌ನಲ್ಲಿ ನಟ ವಿಜಯಕಾಶಿ ಬಲೂನ್ ಹಾರಿಬಿಡುವ ಮೂಲಕ ಸಹ್ಯಾದ್ರಿ ಸಿನಿ ಚಿತ್ರ್ಯೊತ್ಸವಕ್ಕೆ ಚಾಲನೆ ನೀಡಿದರು. ನಂತರ ಪರದೆ ಎರಡಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಸಹ್ಯಾದ್ರಿ ಉತ್ಸವ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಉದ್ಯೋಗ ಮೇಳ:

ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಉದ್ಯೋಗ ಮೇಳಕ್ಕೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದಜಿಲ್ಲಾಧಿಕಾರಿ ಕೆ.ಎ.ದಯಾನಂದ, ಉದ್ಯೋಗಾವಕಾಶಗಳು,ಉದ್ಯಮಿಗಳು ಏನನ್ನು ಬಯಸುತ್ತಾರೆ ಮತ್ತು ಉದ್ಯೋಗ ಪಡೆಯಲು ಪಡಬೇಕಿರುವ ಪ್ರಯತ್ನ ತಿಳಿಸುವ ಉದ್ಧೇಶದಿಂದ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದರು.

ಉದ್ಯೋಗದ ಬೇಡಿಕೆ ಇದೆ. ಉದ್ಯೋಗಾವಕಾಶಗಳು ಇವೆ. ನಿರುದ್ಯೋಗ ಕೂಡ ಇದೆ.ಇದಕ್ಕೆ ನಮ್ಮಲ್ಲಿನ ಕೊರತೆಯೇ ಕಾರಣ. ಉದ್ಯೋಗ ಪಡೆಯಲು ಮತ್ತು ಉದ್ಯೋಗ ನೀಡಲು ಇರುವ ಅವಕಾಶಗಳನ್ನು ತಿಳಿಸಲು ಉದ್ಯೋಗ ಕ್ಲಬ್ ರಚಿಸಲಾಗಿದೆ ಎಂದರು.

ಕೆಲವರು ಎಸ್ಎಸ್ಎಲ್ಸಿ, 7ನೇ ತರಗತಿ ಫೇಲಾದರೂ ನಿರುದ್ಯೋಗದ ಬಗ್ಗೆ ಚಿಂತಿಸುವುದಿಲ್ಲ. ಇರುವ ಕೆಲಸ, ಅವಕಾಶಗಳನ್ನು ವಿಸ್ತರಿಸುತ್ತಾರೆ. ಅವರಿಗೆ ಆದಾಯ, ಲಾಭ ಕಡಿಮೆ ಇರಬಹುದು ಆದರೆ ಉದ್ಯೋಗ ಇದ್ಧೇ ಇರುತ್ತದೆ.ಸೋಲಿನ ಭಯ ಹೋಗದ ಹೊರತು ಗೆಲುವು ಸಾಧ್ಯವಿಲ್ಲ. ನಿರಂತರ ಪ್ರಯತ್ನದಿಂದ ಗೆಲುವು ಸಿಗುತ್ತದೆ. ಪ್ರಯತ್ನಕ್ಕೆಸ್ಫೂರ್ತಿಮುಖ್ಯ. ಆಗ ಯಶಸ್ಸು ಗಳಿಸಲು ಸಾಧ್ಯ. ಉದ್ಯೋಗದ ಕನಸು ಕಟ್ಟಿಕೊಳ್ಳಲು ಉದ್ಯೋಗ ಸಹಕಾರಿಯಾಗಲಿದೆ ಎಂದು ವಿಶ್ಲೇಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.