ADVERTISEMENT

ಶಿವಮೊಗ್ಗ: ಜಿಲ್ಲೆಯಲ್ಲಿ ಸಂಭ್ರಮದ ಸಂಕ್ರಾಂತಿ ಸಡಗರ

​ಪ್ರಜಾವಾಣಿ ವಾರ್ತೆ
Published 16 ಜನವರಿ 2026, 4:44 IST
Last Updated 16 ಜನವರಿ 2026, 4:44 IST
ಶಿವಮೊಗ್ಗ ನಗರದ ತುಂಗಾ ನಗರದಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ಪೊಂಗಲ್ ತಯಾರಿಯಲ್ಲಿ ನಿರತರಾಗಿರುವ ಮಹಿಳೆ
ಶಿವಮೊಗ್ಗ ನಗರದ ತುಂಗಾ ನಗರದಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ಪೊಂಗಲ್ ತಯಾರಿಯಲ್ಲಿ ನಿರತರಾಗಿರುವ ಮಹಿಳೆ   

ಶಿವಮೊಗ್ಗ: ಸೂರ್ಯನು ದಕ್ಷಿಣದಿಂದ ಉತ್ತರಕ್ಕೆ ತನ್ನ ಪಥವನ್ನು ಬದಲಿಸುವ ಸಂಕ್ರಾಂತಿ ಹಬ್ಬವನ್ನು ಗುರುವಾರ ಸಡಗರದಿಂದ ಆಚರಿಸಲಾಯಿತು. ಜಿಲ್ಲೆಯ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಜನರು ಹರ್ಷೋಲ್ಲಾಸದೊಂದಿಗೆ ಸಂಭ್ರಮಿಸಿದರು. 

ಸೂರ್ಯ ದರ್ಶನದೊಂದಿಗೆ ಹಬ್ಬದ ಆರಂಭವಾಯಿತು. ಬೆಳಿಗ್ಗೆ ಮನೆಯಲ್ಲಿ ಪೂಜೆ ಸಲ್ಲಿಸಿ ಎಳ್ಳುಬೆಲ್ಲ ಹಂಚಿ ಸಂಭ್ರಮಿಸಿದರು. ನಂತರ,  ಪುಣ್ಯಕ್ಷೇತ್ರಗಳಿಗೆ ತೆರಳಿ ಪುಣ್ಯಸ್ನಾನ ಮಾಡಿ ದೇವರ ದರ್ಶನ ಪಡೆದು ಭೋಜನ ಸವಿದರು.

ಗ್ರಾಮೀಣ ಭಾಗಗಳಲ್ಲಿ ಸಾಂಪ್ರದಾಯಿಕ ಕಾರ್ಯಕ್ರಮಗಳು ನಡೆದವು. ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆದವು. ಈ ಸಂದರ್ಭ ಹಬ್ಬದ ವಿಶೇಷ ತಿನಿಸು ಅಕ್ಕಿ ಪಾಯಸ. ಇದರೊಟ್ಟಿಗೆ ತೆಂಗಿನಕಾಯಿ, ತಿನಿಸು ಬೇಳೆ ಮತ್ತು ಸಿಹಿ ಉಪ್ಪಿನಕಾಯಿ ಸವಿಯಲಾಯಿತು. ಹಬ್ಬದೂಟವು ಸಂಕ್ರಾಂತಿಯ ಸಂತೋಷವನ್ನು ಹೆಚ್ಚಿಸಿತು. 

ADVERTISEMENT

ನಗರ ಪ್ರದೇಶಗಳಲ್ಲೂ ಸಂಕ್ರಾಂತಿ ಹಬ್ಬದ ಉತ್ಸಾಹ ಕಂಡುಬಂದಿತು. ನಗರದ ತುಂಗಾ ನಗರ ಸೇರಿದಂತೆ ಹಲವರೆಡೆ ಸಂಕ್ರಾಂತಿ ಹಬ್ಬದ ಪ್ರಯುಕ್ತ ಪೊಂಗಲ್ ತಯಾರಿಯಲ್ಲಿ ಮಹಿಳೆಯರು ನಿರತರಾಗಿದ್ದುದು ಕಂಡುಬಂದಿತು. ಮನೆಮುಂದೆ ಚಂದದ ರಂಗೋಲಿ ಹಾಕಿ ಸಂಭ್ರಮಿಸಿದರು. 

‘ಸಂಕ್ರಾಂತಿ ಹಬ್ಬಕ್ಕೆ ಸಿಹಿ ಪಾಯಸ ತಯಾರಿಕೆ ಮುಖ್ಯ ಆಕರ್ಷಣೆ. ಸೂರ್ಯೋದಯದ ಮೊದಲ ಕಿರಣವನ್ನು ನೋಡಿದ ನಂತರ ಹೊಸ ಫಸಲನ್ನು ಹಾರಿಸುತ್ತೇವೆ. ಇದು ಹಬ್ಬದ ಶುಭ ಸಂಕೇತವಾಗಿದೆ’ ಎಂದು ಬೀರನಹಳ್ಳಿಯ ರೈತ ಮನು ಹೇಳಿದರು. 

ಶಿವಮೊಗ್ಗ ನಗರದ ತುಂಗಾನಗರದಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ಮನೆ ಮುಂಭಾಗ ರಂಗೋಲಿ ಬಿಡಿಸುವುದರಲ್ಲಿ ನಿರತರಾಗಿರುವ ಹೆಣ್ಣು ಮಕ್ಕಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.