ADVERTISEMENT

ಸಹ್ಯಾದ್ರಿ ಉತ್ಸವ: ಒಂದು ದಿನ ಮುಂದೂಡಿಕೆ

23ರ ಬದಲು 24ರಂದು ಉದ್ಘಾಟನೆ, ಫಲಪುಷ್ಪ ಪ್ರದರ್ಶನ, ಮೆರವಣಿಗೆಗೂ ಅದೇ ಸ್ಥಿತಿ

​ಪ್ರಜಾವಾಣಿ ವಾರ್ತೆ
Published 21 ಜನವರಿ 2019, 12:56 IST
Last Updated 21 ಜನವರಿ 2019, 12:56 IST

ಶಿವಮೊಗ್ಗ:ಸಿದ್ಧಗಂಗಾ ಶ್ರೀಗಳ ನಿಧನಕ್ಕೆ ಸರ್ಕಾರ ಮೂರು ದಿನ ಶೋಕಾಷರಣೆ ಘೋಷಿಸಿದೆ. ಹಾಗಾಗಿ, ಸಹ್ಯಾದ್ರಿ ಉತ್ಸವ ಉದ್ಘಾಟನಾ ಕಾರ್ಯಕ್ರಮವನ್ನುಜ. 23ರ ಬದಲು ಒಂದು ದಿನ ಮುಂದೂಡಲಾಗಿದೆ.

23ರ ಸಂಜೆ 5.30ಕ್ಕೆ ಸಾಹಿತಿ ನಾ. ಡೀಸೋಜಉತ್ಸವ ಉದ್ಘಾಟಿಸಬೇಕಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಡಿ.ಸಿ. ತಮ್ಮಣ್ಣ ಸ್ಮರಣ ಸಂಚಿಕೆ ಬಿಡುಗಡೆ ಮಾಡುವವರಿದ್ದರು. ಬದಲಿಗೆ 24ರ ಸಂಜೆ 5ಕ್ಕೆ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಕೆ.ಎ. ದಯಾನಂದ ಮಾಹಿತಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಅಂದು ಮಧ್ಯಾಹ್ನ 2.30ಕ್ಕೆ ಕುವೆಂಪು ರಂಗಮಂದಿರದಲ್ಲಿ ಆರಂಭವಾಗಬೇಕಿದ್ದ ಉತ್ಸವದ ಮೆರವಣಿಗೆ, ಮಧ್ಯಾಹ್ನ 3ಕ್ಕೆ ಅಂಬೇಡ್ಕರ್ ಭವನದಲ್ಲಿ ನಿಗದಿಯಾಗಿದ್ದ ಫಲಪುಷ್ಪ ಪ್ರದರ್ಶನ ಉದ್ಘಾಟನೆ ಕಾರ್ಯಕ್ರಮಗಳೂ 24ಕ್ಕೆ ಮುಂದೂಡಲ್ಪಟ್ಟಿವೆ.ಅದೇ ಸಮಯಕ್ಕೆ ನಡೆಯಲಿವೆ.23ರ ಸಂಜೆ ವಿವಿಧ ರಾಜ್ಯಗಳ 223 ಕಲಾವಿದರು ಪ್ರದರ್ಶಿಸಬೇಕಿದ್ದ ‘ಜಾನಪದ ಭಾರತ ನೃತ್ಯರೂಪಕ’ 24ರ ಸಂಜೆ ಮುಂದುವರಿಯಲಿವೆ. ಉಳಿದಂತೆ 24ರಿಂದ 27ರವರೆಗೆ ನಾಲ್ಕು ದಿನಗಳ ಕಾರ್ಯಕ್ರಮಗಳು ನಿದಿಯಂತೆ ನಡೆಯಲಿವೆ ಎಂದು ವಿವರ ನೀಡಿದರು.

ADVERTISEMENT

ಮಂಗನಕಾಯಿಲೆ ನಿಯಂತ್ರಣಕ್ಕೆ ಜಿಲ್ಲಾಡಳಿತ ಎಲ್ಲ ರೀತಿಯ ಕ್ರಮ ಕೈಗೊಂಡಿದೆ. ಅರಳಗೋಡು ಗ್ರಾಮಸ್ಥರ ಬೇಡಿಕೆಗೆ ಸ್ಪಂದಿಸಿದೆ. ಉತ್ಸವಕ್ಕೂ ಸಮಸ್ಯೆಗಳಿಗೂ ತಳುಕು ಹಾಕುವುದು ಬೇಡ. ಸಂಕಷ್ಟದಲ್ಲಿರುವ ನೂರಾರು ಕಲಾವಿದರಿಗೆ ಉತ್ಸವ ಆರ್ಥಿಕ ನೆರವು ನೀಡುವ ವೇದಿಕೆಯಾಗಿದೆ. ಜನಪ್ರತಿನಿಧಿಗಳೂ ಬೆಂಬಲ ನೀಡಿದ್ದಾರೆ. ಹಾಗಾಗಿ, ಮುಂದುವರಿಯಲಿದೆ ಎಂದು ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.