ADVERTISEMENT

ಶಿಕಾರಿಪುರ: ಗಣೇಶ ಮೂರ್ತಿ ಖರೀದಿ ಜೋರು

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2024, 13:47 IST
Last Updated 6 ಸೆಪ್ಟೆಂಬರ್ 2024, 13:47 IST
ಶಿಕಾರಿಪುರದ ಪಟ್ಟಣದಲ್ಲಿ ಶುಕ್ರವಾರ ಮಾರಾಟ ಮಾಡಲು ಇರಿಸಿದ್ದ ಗಣೇಶ ಮೂರ್ತಿ
ಶಿಕಾರಿಪುರದ ಪಟ್ಟಣದಲ್ಲಿ ಶುಕ್ರವಾರ ಮಾರಾಟ ಮಾಡಲು ಇರಿಸಿದ್ದ ಗಣೇಶ ಮೂರ್ತಿ   

ಶಿಕಾರಿಪುರ: ಗಣೇಶ ಚತುರ್ಥಿ ಪ್ರಯುಕ್ತ ಗಣೇಶ ಮೂರ್ತಿಗಳ ಖರೀದಿ ಭರಾಟೆ ಶುಕ್ರವಾರ ಜೋರಾಗಿತ್ತು. 

ಪಟ್ಟಣದ ಮಿಡ್ಲ್ ಸ್ಕೂಲ್ ರಸ್ತೆ ಹಾಗೂ ದೊಡ್ಡಪೇಟೆ ರಸ್ತೆ ಬದಿಗಳಲ್ಲಿ ಇರಿಸಿರುವ ಮೂರ್ತಿಗಳನ್ನು ಕೆಲವರು ಖರೀದಿ ಮಾಡಿದರು. ಇನ್ನೂ ಕೆಲವರು ಶನಿವಾರ ಮುಂಜಾನೆ ಗಣೇಶ ಮೂರ್ತಿಗಳನ್ನು ಕೊಂಡೊಯ್ಯುವ ಉದ್ದೇಶದಿಂದ ಮೂರ್ತಿ ತಯಾರಕರಿಗೆ ಮುಂಗಡ ಹಣ ನೀಡುತ್ತಿದ್ದ ದೃಶ್ಯ ಕಂಡುಬಂದಿತು. ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಅಗತ್ಯವಾದ ಹೂವು ಹಣ್ಣು ಹಾಗೂ ಅಲಂಕಾರಿಕಾ ವಸ್ತುಗಳನ್ನು ಖರೀದಿಸಿದರು. 

ಗಣೇಶಮೂರ್ತಿ ಪ್ರತಿಷ್ಠಾಪಿಸುವ ಯುವಕ ಮಂಡಳಿ ಪದಾಧಿಕಾರಿಗಳು ಏಕಗವಾಕ್ಷಿ ಮೂಲಕ ಅನುಮತಿ ಪಡೆಯಲು ತಾಲ್ಲೂಕು ಕಚೇರಿಯಲ್ಲಿ ಜಮಾಯಿಸಿದ್ದರು. ಹಲವು ಬಡಾವಣೆಯ ರಸ್ತೆಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.