ADVERTISEMENT

ಶಿವಮೊಗ್ಗ: ತಡರಾತ್ರಿವರೆಗೂ ಮೆರವಣಿಗೆ;ನಸುಕಿನ ಜಾವ ಹಿಂದೂ ಮಹಾಸಭಾ ಗಣಪನ ವಿಸರ್ಜನೆ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2025, 6:44 IST
Last Updated 7 ಸೆಪ್ಟೆಂಬರ್ 2025, 6:44 IST
   

ಶಿವಮೊಗ್ಗ: ಇಲ್ಲಿನ ಹಿಂದೂ ಸಂಘಟನಾ ಮಹಾಮಂಡಳಿಯ (ಹಿಂದೂ ಮಹಾಸಭಾ) ಗಣೇಶನ ವಿಸರ್ಜನೆ ಭಾನುವಾರ ಬೆಳಗಿನ ಜಾವ 3.50ಕ್ಕೆ ತುಂಗಾ ನದಿಯ ಭೀಮನ ಮಡುವಿನಲ್ಲಿ ನೆರವೇರಿತು.

ಶನಿವಾರ ಬೆಳಿಗ್ಗೆ 11 ಗಂಟೆಗೆ ಕೋಟೆ ಭೀಮೇಶ್ವರನ ಗುಡಿಯಿಂದ ಗಣೇಶನ ವಿಸರ್ಜನಾ ಪೂರ್ವ ರಾಜಬೀದಿ ಉತ್ಸವ ಆರಂಭವಾಗಿತ್ತು.

ತಡರಾತ್ರಿವರೆಗೂ ಶಿವಮೊಗ್ಗ ನಗರದಲ್ಲಿ ಮೆರವಣಿಗೆ ಸಾಗಿದ್ದು, ನಸುಕಿನಲ್ಲಿ ಸುರಿವ ಮಳೆಯ ನಡುವೆ ಗಣೇಶನ ವಿಸರ್ಜನೆ ಮಾಡಲಾಯಿತು.

ADVERTISEMENT

ಈ ವೇಳೆ ಶಿವಮೊಗ್ಗ ಶಾಸಕ ಎಸ್. ಎನ್. ಚನ್ನಬಸಪ್ಪ ಹಾಗೂ ಹಿಂದೂ ಸಂಘಟನಾ ಮಹಾಮಂಡಳಿಯ ಮಂಡಳಿಯ ಪ್ರಮುಖರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.