ADVERTISEMENT

ಹೊಂಬುಜ: 11ರಿಂದ ವನವಾಸಿಗಳ ಪ್ರಾಂತ್ಯ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 8 ಜನವರಿ 2020, 13:53 IST
Last Updated 8 ಜನವರಿ 2020, 13:53 IST

ಶಿವಮೊಗ್ಗ: ಹೊಸನಗರ ತಾಲ್ಲೂಕಿನ ಹೊಂಬುಜ ಜೈನ ಮಠದಲ್ಲಿ ಜ.11 ಮತ್ತು 12ರಂದು ವನವಾಸಿಗಳ ಪ್ರಾಂತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ.

ವನವಾಸಿಗಳಲ್ಲಿ ಸ್ವಾಭಿಮಾನ, ಜಾಗೃತಿ, ಸಂಸ್ಕೃತಿಯ ಸಂರಕ್ಷಣೆ ಹಾಗೂ ಅವರ ಸಮಗ್ರ ವಿಕಾಸಕ್ಕಾಗಿ ಮೂರು ವರ್ಷಗಳಿಗೆ ಒಮ್ಮೆಪ್ರಾಂತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗುತ್ತಿದೆ. ಈ ಬಾರಿಯ ಸಮ್ಮೇಳನದಲ್ಲಿ ರಾಜ್ಯದ 16 ಜಿಲ್ಲೆಗಳಿಂದ ಸುಮಾರು 228 ವಿವಿಧ ವನವಾಸಿ ಸಮುದಾಯದ ಪ್ರತಿನಿಧಿಗಳು ಭಾಗವಹಿಸುವರು. ಈ ಜನಾಂಗಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತುಚರ್ಚೆ ನಡೆಸಲಾಗುವುದು ಎಂದುವನವಾಸಿ ಕಲ್ಯಾಣ ಸಂಸ್ಥೆಯ ಅಧ್ಯಕ್ಷ ಎಂ.ಎಸ್.ವೆಂಕಟೇಶ್ ಸಾಗರ್ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಜೈನ ಮಠದ ಶ್ರೀಗಳು,ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಶಾಸಕ ಆರಗ ಜ್ಞಾನೇಂದ್ರ ಭಾಗವಹಿಸುವರು ಎಂದರು.

ADVERTISEMENT

ನಗರ, ಗ್ರಾಮಗಳ ನಾಗರಿಕ ಜೀವನ ಕ್ರಮದಿಂದ ವಿಭಿನ್ನವಾಗಿ ಸುದೂರ ಗುಡ್ಡಗಾಡುಗಳಲ್ಲಿ, ವನಪ್ರದೇಶಗಳಲ್ಲಿ ವಾಸಿಸುವ ಜನಾಂಗಗಳೇ ವನವಾಸಿಗಳು.ಪರಿಶಿಷ್ಟ ಪಂಗಡಕ್ಕೆ ಸೇರಿದ್ದಾರೆ. ದೇಶದ ಜನಸಂಖ್ಯೆಯ ಶೇ 9ರಷ್ಟು ಇದ್ದಾರೆ.ರಾಜ್ಯದಲ್ಲಿ ಸುಮಾರು 50 ಲಕ್ಷಸಂಖ್ಯೆ ಇದೆ. 50ಪಂಗಡಗಳಿವೆ ಎಂದುವಿವರ ನೀಡಿದರು.

ವನವಾಸಿ ಕಲ್ಯಾಣ ಸಂಸ್ಥೆ ವನವಾಸಿಗಳ ಸರ್ವಾಂಗೀಣವಿಕಾಸಕ್ಕಾಗಿ ವಿವಿಧ ಆಯಾಮಗಳ ಮೂಲಕ ಕಾರ್ಯನಿರ್ವಹಿಸುತ್ತಿದೆ. ಇದು ರಾಷ್ಟ್ರೀಯ ವಿಚಾರಧಾರೆಯ ಸ್ವಯಂಸೇವಾ ಸಂಸ್ಥೆ.ಉಚಿತ ವಿದ್ಯಾರ್ಥಿನಿಲಯ, ಬಾಲಸಂಸ್ಕಾರ ಕೇಂದ್ರ, ಮನೆ ಪಾಠ ಕೇಂದ್ರ, ಕ್ರೀಡಾ ಕೇಂದ್ರ, ಹೊಲಿಗೆ ತರಬೇತಿ ಕೇಂದ್ರ, ಕೃಷಿ, ಗೋ-ವಿಕಾಸ ಕೇಂದ್ರ, ಸ್ವಸಹಾಯ ಸಂಘ, ವೈದ್ಯಕೀಯ ಶಿಬಿರಗಳು ಸೇರಿ ನಾನಾ ರೀತಿಯ ಸೇವಾ ಕಾರ್ಯ ಮಾಡಲಾಗುತ್ತಿದೆ. ರಾಜ್ಯದ 16 ಜಿಲ್ಲೆಗಳ 963 ಗ್ರಾಮಗಳಲ್ಲಿ 465 ಸೇವಾ ಪ್ರಕಲ್ಪಗಳು ನಡೆಯುತ್ತಿವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿಶ್ರೀನಿವಾಸ್, ಸುಮಾ ಮೂರ್ತಿ, ಯಶೋಧರ ಇಂದ್ರಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.