
ಪ್ರಜಾವಾಣಿ ವಾರ್ತೆ
ಕುವೆಂಪು
ಶಿವಮೊಗ್ಗ: ಉಷಾ ಸಾಹಿತ್ಯ ಮಾಲೆ ಮೈಸೂರು ಹಾಗೂ ಶಿವಮೊಗ್ಗ ಹಾಗೂ ಇಂದಿರಾ ಪ್ರಕಾಶ ಅಕಾಡೆಮಿ ವತಿಯಿಂದ ಮಾರ್ಚ್ 8ರಂದು ಮಧ್ಯಾಹ್ನ 3.30ಕ್ಕೆ ವಿನೋಬ ನಗರದ ಇಂದಿರಾ ಪ್ರಕಾಶ ಅಕಾಡೆಮಿಯಲ್ಲಿ ವಿಶ್ವ ಮಹಿಳಾ ದಿನಾಚರಣೆ ಹಾಗೂ ಕವಿಗೋಷ್ಠಿ ಆಯೋಜಿಸಲಾಗಿದೆ.
ದೇಶಕ್ಕಾಗಿ ಪ್ರಾಣ ಬಲಿದಾನ ಮಾಡಿದ, ಬ್ರಿಟೀಷರ ಹಾಗೂ ಮೊಘಲರ ವಿರುದ್ಧ ಹೋರಾಡಿದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ್ದ ವಿಶಿಷ್ಟ ಸಾಧಕ ಮಹಿಳೆಯರ ಬಗ್ಗೆ ಕವನ ರಚಿಸಿ ವಾಚಿಸಿಲು ಕವಿ, ಕವಯತ್ರಿಯರಿಗೆ ಆಹ್ವಾನ ನೀಡಲಾಗಿದೆ ಸಾಹಿತಿ ಎಚ್.ಎಸ್.ರುದ್ರೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಸರು ನೋಂದಾಯಿಸಿಕೊಳ್ಳಲು ಮಾರ್ಚ್ 3 ಕೊನೆಯ ದಿನ. ಮಾಹಿತಿ ಹಾಗೂ ನೋಂದಣಿಗೆ ಮೊ. ಸಂಖ್ಯೆ: 94485 28641 ಸಂಪರ್ಕಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.