ADVERTISEMENT

ಶಿವಮೊಗ್ಗ | ಗಾಂಜಾ ಮಾರಾಟ: ಬಂಧನ

​ಪ್ರಜಾವಾಣಿ ವಾರ್ತೆ
Published 2 ಜುಲೈ 2025, 14:28 IST
Last Updated 2 ಜುಲೈ 2025, 14:28 IST
ಶಿವಮೊಗ್ಗ ಪೊಲೀಸರು ಬಂಧಿಸಿದ ಆರೋಪಿ ಸೈಯದ್ ಫೈಜು
ಶಿವಮೊಗ್ಗ ಪೊಲೀಸರು ಬಂಧಿಸಿದ ಆರೋಪಿ ಸೈಯದ್ ಫೈಜು   

ಶಿವಮೊಗ್ಗ: ಹೊನ್ನಾಳಿ ಸಮೀಪದ ಬುಳ್ಳಾಪುರ-ಸೂಗೂರು ಸರ್ವೀಸ್ ರಸ್ತೆಯ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ ಪೊಲೀಸರು, ಅಂದಾಜು ₹25,000 ಮೌಲ್ಯದ 1 ಕೆ.ಜಿ 298 ಗ್ರಾಂ ಗಾಂಜಾ ವಶಕ್ಕೆ ಪಡೆದಿದ್ದಾರೆ. 

ಭದ್ರಾವತಿಯ ಸೀಗೆ ಬಾಗಿ ಸೈಯದ್ ಫೈಜು (31) ಬಂಧಿತ. 

ಸಿಇಎನ್ ಕ್ರೈಂ ಪೊಲೀಸ್ ಠಾಣೆ ಡಿವೈಎಸ್‌ಪಿ ಕೆ. ಕೃಷ್ಣಮೂರ್ತಿ ನೇತೃತ್ವದಲ್ಲಿ ಎಎಸ್ಐ ಶೇಖರ್, ಎಚ್‌ಸಿ ವಿಭಾಗದ ಬಿ.ಎಸ್. ಕರಿಬಸಪ್ಪ, ಧರ್ಮಾ ನಾಯ್ಕ, ಅವಿನಾಶ, ಡಿ.ಆರ್. ಚಂದ್ರಶೇಖರ್‌, ಕಾನ್‌ಸ್ಟೆಬಲ್ ಬಿ.ಎಚ್‌. ಗಿರೀಶ್‌ ಸ್ವಾಮಿ, ನಾರಾಯಣ ಸ್ವಾಮಿ, ಬಿ. ರವಿ, ಎಲ್.ಬಿ. ಪ್ರಮೋದ್‌ ಅವರ ತಂಡ ಕಾರ್ಯಾಚರಣೆ ನಡೆಸಿತ್ತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.