ADVERTISEMENT

ಹೊಸನಗರ | ಮರಳು ಅಕ್ರಮ ಸಂಗ್ರಹ; ವಶ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2023, 16:23 IST
Last Updated 9 ನವೆಂಬರ್ 2023, 16:23 IST
ಹೊಸನಗರ ತಾಲ್ಲೂಕು ಪುರಪ್ಪೇಮನೆ ನದಿ ತೀರದಲ್ಲಿ ಸಂಗ್ರಹಿಸಿಟ್ಟ ಮರಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ
ಹೊಸನಗರ ತಾಲ್ಲೂಕು ಪುರಪ್ಪೇಮನೆ ನದಿ ತೀರದಲ್ಲಿ ಸಂಗ್ರಹಿಸಿಟ್ಟ ಮರಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ   

ಹೊಸನಗರ: ತಾಲ್ಲೂಕಿನ ಪುರಪ್ಪೇಮನೆ ಸಮೀಪದ ಶರಾವತಿ ನದಿ ತೀರದಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ 150 ಟನ್ ಮರಳನ್ನು ಪೊಲೀಸ್ ಮತ್ತು ಗಣಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಹೊಸನಗರ ಸಿಪಿಐ ಗುರಣ್ಣ ಎಸ್. ಹೆಬ್ಬಾಳ್, ಪಿಎಸ್ಐ ಶಿವಾನಂದ‌ ವೈ.ಕೆ, ಶಿವಮೊಗ್ಗ ಗಣಿ‌ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ಪ್ರಿಯಾ ನೇತೃತ್ವದಲ್ಲಿ ಜಂಟಿ‌ ಕಾರ್ಯಾಚರಣೆ ನಡೆಸಿ ಅಕ್ರಮ ಮರಳನ್ನು ವಶಪಡಿಸಿ‌ಕೊಳ್ಳಲಾಗಿದೆ.

ಕಾರ್ಯಾಚರಣೆಯಲ್ಲಿ ಗಂಗಪ್ಪ ಬಟೋಲಿ, ಸುನಿಲ್, ಶಿವಪುತ್ರ, ಅವಿನಾಶ ಇತರರು ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.