ADVERTISEMENT

ಸಿಗಂದೂರು ಸೇತುವೆ ಮಾದರಿ ಗಣಪ ಮಂಟಪ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2025, 5:53 IST
Last Updated 30 ಆಗಸ್ಟ್ 2025, 5:53 IST
ಹೊಸನಗರ ತಾಲ್ಲೂಕು ಯಡೂರಿನಲ್ಲಿ ಸಿಗಂದೂರು ಸೇತುವೆ ಮಾದರಿಯ ಗಣಪ ಮಂಟಪ ನಿರ್ಮಾಣ ಮಾಡಿದ್ದು ಗಮನ ಸೆಳೆದಿದೆ 
ಹೊಸನಗರ ತಾಲ್ಲೂಕು ಯಡೂರಿನಲ್ಲಿ ಸಿಗಂದೂರು ಸೇತುವೆ ಮಾದರಿಯ ಗಣಪ ಮಂಟಪ ನಿರ್ಮಾಣ ಮಾಡಿದ್ದು ಗಮನ ಸೆಳೆದಿದೆ    

ಹೊಸನಗರ: ತಾಲ್ಲೂಕಿನ ಸುಳುಗೋಡು– ಯಡೂರು ವಿನಾಯಕ ಸೇವಾ ಸಮಿತಿಯಿಂದ ಪ್ರತಿ ವರ್ಷ ವಿಶೇಷ ರೀತಿಯಲ್ಲಿ ಗಣೇಶೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆ. ಈ ಬಾರಿ ಸಿಗಂದೂರು ಸೇತುವೆಯ ಮಾದರಿ ಗಣಪ ಮಂಟಪ ನಿರ್ಮಾಣ ಮಾಡಿ ಗಮನ ಸೆಳೆದಿದೆ.

ಮಲೆನಾಡು ಭಾಗದಲ್ಲಿ ತೀವ್ರ ಮಳೆಯ ನಡುವೆಯೂ ಸಾರ್ವಜನಿಕ ಗಣೇಶೋತ್ಸವವನ್ನು ಗ್ರಾಮೀಣರು ಉತ್ಸಾಹದಿಂದ ವಿಜೃಂಭಣೆಯಿಂದ ದ್ದೂರಿಯಾಗಿ ಆಚರಿಸಿದರು.

ಹಿಂದಿನ ವರ್ಷ ಮಾಣಿ ಜಲಾಶಯದ ಮಾದರಿಯನ್ನು ನಿರ್ಮಿಸಿ ಎಲ್ಲರ ಮೆಚ್ಚುಗೆ ಪಡೆದಿದ್ದ ಸಮಿತಿ, ಈ ಬಾರಿ ಯಡೂರಿನ ಅಭೀಶ್ ಹಾಗೂ ಪ್ರಜ್ವಲ್ ಮಾಲೀಕತ್ವದ ಸಂಸ್ಥೆ ಜೂಮ್ ಬ್ಯಾಕ್ ಗ್ರೌಂಡ್ ಕೈಚಳಕದಲ್ಲಿ ಅರಳಿದ ಸಿಗಂದೂರು ಸೇತುವೆಯ ಮಾದರಿಯು ಗಣೇಶೋತ್ಸವಕ್ಕೆ ವಿಶಿಷ್ಟ ಮೆರುಗು ನೀಡಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.