ತೀರ್ಥಹಳ್ಳಿ ತಾಲ್ಲೂಕಿನ ಕುಂದಾದ್ರಿ ಬೆಟ್ಟದ ಮೇಲ್ಭಾಗದಲ್ಲಿ ಅಸ್ತಿಪಂಜರ ದೊರೆತ ಸ್ಥಳದಲ್ಲಿ ತಜ್ಞರ ತಂಡದಿಂದ ಪರಿಶೀಲನೆ ನಡೆಯಿತು
ತೀರ್ಥಹಳ್ಳಿ: ಕುಂದಾದ್ರಿ ಬೆಟ್ಟದ ಮೇಲ್ಭಾಗದ ಪಾರ್ಕಿಂಗ್ ಸ್ಥಳದ ಸಮೀಪದ ಕಾಡಿನಲ್ಲಿ ಅರೆಬೆಂದ, ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ದೇಹದ ಅಸ್ತಿಪಂಜರ ಮಂಗಳವಾರ ಪತ್ತೆಯಾಗಿದೆ.
ಬೆಳಗಿನ ಜಾವ ಕುಂದಾದ್ರಿ ಬೆಟ್ಟದ ಮೇಲ್ಭಾಗದಲ್ಲಿ ಚಾರಣಿಗರು ಚಾರಣ ನಡೆಸುವಾಗ ದೂರದಲ್ಲಿ ಅಸ್ತಿಪಂಜರ ಇರುವುದು ಕಂಡುಬಂದಿದೆ. ಪೊಲೀಸರು ಸ್ಥಳ ಮಹಜರು ನಡೆಸಿದ್ದು, ಅಂದಾಜು ಒಂದು ತಿಂಗಳ ಹಿಂದೆ ನಡೆದ ಪ್ರಕರಣ ಇದಾಗಿದೆ ಎಂದು ಶಂಕಿಸಲಾಗಿದೆ. ಅಸ್ತಿಪಂಜರದ ಸಮೀಪದಲ್ಲಿ ಗೋಲ್ಡ್ ಕೇಸ್ ವಾಚ್, ಕೂಲಿಂಗ್ ಗ್ಲಾಸ್ ದೊರೆತಿದ್ದು ಪುರುಷನ ಶವ ಇರಬಹುದು ಎಂದು ಶಂಕಿಸಲಾಗಿದೆ.
ಸ್ಥಳಕ್ಕೆ ಪೊಲೀಸರು, ಬೆರಳಚ್ಚು ತಜ್ಞರು, ಶ್ವಾನ ದಳ ಭೇಟಿ ನೀಡಿದೆ. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕಾರ್ಯಪ್ಪ, ಡಿವೈಎಸ್ಪಿ ಅರವಿಂದ ಎನ್. ಕಲಗುಜ್ಜಿ, ಪೊಲೀಸ್ ಇನ್‌ಸ್ಪೆಕ್ಟರ್ ಕೆ.ಶ್ರೀಧರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.