ಸೊರಬ: ತಾಲ್ಲೂಕಿನ ಮೂಡದೀವಳಿಗೆ ಗ್ರಾಮದ ಮಂಜಪ್ಪ ಅವರ ಕುಟುಂಬಕ್ಕೆ ಗ್ರಾಮಸ್ಥರು ಸಾಮಾಜಿಕ ಬಹಿಷ್ಕಾರ ಹಾಕಿದ್ದು, ಬುಧವಾರ ತಹಶೀಲ್ದಾರ್ ಮಂಜುಳಾ ಹೆಗಡಾಳ್ ಅವರಿಗೆ ಸಮಸ್ಯೆ ಪರಿಹಾರಕ್ಕೆ ಕೋರಿ ಕುಟುಂಬದವರು ಮನವಿ ಸಲ್ಲಿಸಿದರು.
‘ನಮ್ಮ ಜಮೀನಿನ ಪಕ್ಕದಲ್ಲಿ ಕೃಷಿ ಚಟುವಟಿಕೆಗೆ ದಾರಿ ಬಿಡಲಾಗಿದ್ದು, ಜಮೀನಿನ ಮಧ್ಯ ಭಾಗದಲ್ಲೇ ದಾರಿ ಬಿಡುವಂತೆ ಕುಟುಂಬಕ್ಕೆ ಗ್ರಾಮದ ಕೆಲವು ಜನರು ಹಲ್ಲೆ ಮಾಡುತ್ತಿದ್ದಾರೆ. ಬುಧವಾರ ನಾಟಿ ಮಾಡಲು ಹೋದಾಗ ಅಡ್ಡಿಪಡಿಸಿ ದೌರ್ಜನ್ಯ ಮಾಡಿದ್ದಾರೆ. ಯಾವುದೇ ನಕ್ಷೆ ಇಲ್ಲದ ದಾರಿಯಲ್ಲಿ ಗ್ರಾಮದ ಜನರು ಓಡಾಡಲು ದಾರಿ ಬಿಟ್ಟುಕೊಟ್ಟಿದ್ದರೂ ಸಾಮಾಜಿಕ ಬಹಿಷ್ಕಾರ ಹಾಕಿ ನಮ್ಮನ್ನು ಮಾನಸಿಕ ಹಾಗೂ ದೈಹಿಕವಾಗಿ ಹಿಂಸಿಸುತ್ತಿದ್ದಾರೆ. ಕೂಡಲೇ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.
‘ಗ್ರಾಮಸ್ಥರು ಯಾರಾದರು ನಮ್ಮ ಕುಟುಂಬದ ಜೊತೆ ಮಾತನಾಡಿದರೆ ಅವರಿಗೆ ₹ 5,000 ದಂಡ ವಿಧಿಸಲು ಗ್ರಾಮಸ್ಥರು ನಿರ್ಣಯ ಕೈಗೊಂಡಿದ್ದಾರೆ. ಗ್ರಾಮಸ್ಥರು ಕೇಳಿದ ಜಾಗದಲ್ಲಿ ದಾರಿ ಬಿಟ್ಟು ಕೊಟ್ಟಿಲ್ಲ ಎನ್ನುವ ಕಾರಣಕ್ಕೆ ಲಕ್ಷಾಂತರ ರೂಪಾಯಿ ಬೆಳೆ ನಾಶ ಮಾಡಲಾಗಿದೆ. ಪೈಪ್ ಹಾಳು ಮಾಡಿದ್ದಾರೆ’ ಎಂದು ಆರೋಪಿಸಿದರು.
ಈ ವೇಳೆ ಗ್ರಾಮದ ಮಂಜಪ್ಪ, ಶಶಿಕುಮಾರ್, ಮುಕುಂದಪ್ಪ, ಗಣೇಶ್ ಇದ್ದರು.
ತಾಲ್ಲೂಕಿನಲ್ಲಿ ಕೆಲವು ಗ್ರಾಮಗಳಲ್ಲಿ ಬಹಿಷ್ಕಾರ ಪ್ರಕರಣ ಕಂಡು ಬರುತ್ತಿದ್ದು ಮೂಡ ದೀವಳಿಗೆ ಗ್ರಾಮದಲ್ಲಿ ಒಂದು ಕುಟುಂಬಕ್ಕೆ ಬಹಿಷ್ಕಾರ ನೀಡಿರುವ ಕುರಿತು ಮನವಿ ನೀಡಿದ್ದಾರೆ. ಕೂಡಲೇ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದುಮಂಜುಳಾ ಹೆಗಡಾಳ್ ತಹಶೀಲ್ದಾರ್ ಸೊರಬ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.