ADVERTISEMENT

ಸೊರಬ | ಭತ್ತದ ಗದ್ದೆಯಲ್ಲಿ‌ ‘ನಾಟಿ ಸಂಭ್ರಮ’

ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ವಿಶೇಷ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2025, 7:26 IST
Last Updated 25 ಆಗಸ್ಟ್ 2025, 7:26 IST
ಸೊರಬ ಪಟ್ಟಣದ ಹಿರೇಶಕುನ ಗ್ರಾಮದ ಕುಣಜಿಬೈಲ್ ಬಳಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯಿಂದ ನಾಟಿ ಸಂಭ್ರಮ ಕಾರ್ಯಕ್ರಮ ನಡೆಸಲಾಯಿತು
ಸೊರಬ ಪಟ್ಟಣದ ಹಿರೇಶಕುನ ಗ್ರಾಮದ ಕುಣಜಿಬೈಲ್ ಬಳಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯಿಂದ ನಾಟಿ ಸಂಭ್ರಮ ಕಾರ್ಯಕ್ರಮ ನಡೆಸಲಾಯಿತು   

ಸೊರಬ: ಪಟ್ಟಣದ ಹಿರೇಶಕುನ ಗ್ರಾಮದ ಕುಣಜಿಬೈಲ್‌ನಲ್ಲಿ ರೈತರಿಗೆ ಗೌರವಿಸುವ ಹಾಗೂ ಯುವಕರಲ್ಲಿ ಕೃಷಿ ಆಸಕ್ತಿ ಬೆಳೆಸುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯಿಂದ ಶನಿವಾರ ‘ನಾಟಿ ಸಂಭ್ರಮ’ ಕಾರ್ಯಕ್ರಮ ನಡೆಸಲಾಯಿತು.

‘ದೇಶದ ಬೆನ್ನೆಲುಬು ರೈತರು.‌ ಸಮಾಜದಲ್ಲಿ ರೈತರು ಹಾಗೂ ಸೈನಿಕರನ್ನು ಗೌರವದಿಂದ ಕಾಣುವ ಜತೆಗೆ ಅವರನ್ನು ಸ್ಮರಿಸುವ ಗುಣ ಬೆಳೆಸಿಕೊಳ್ಳಬೇಕು. ರೈತ ಬೆಳೆ ಬೆಳೆದು ಅನ್ನ ನೀಡಿದರೆ, ಯೋಧರು ನಾಡಿನ ರಕ್ಷಣೆಗೆ ಗಡಿ ಕಾಯುತ್ತಿದ್ದಾರೆ. ಅಂತವರನ್ನು ಗೌರವದಿಂದ ಕಾಣುವುದು ಪ್ರತಿಯೊಬ್ಬರ ಕರ್ತವ್ಯ’ ಎಂದು ಹೇಳಿದರು.

‘ರೈತರ ಮುಂದೆ ಅನೇಕ ಸವಾಲುಗಳಿದ್ದು, ರೈತರ ಆತ್ಮಹತ್ಯೆ ಪ್ರಕರಣಗಳು ನಡೆಯುತ್ತಲೇ ಇವೆ. ರೈತರು ಆತ್ಮಸ್ಥೈರ್ಯ ಕಳೆದುಕೊಳ್ಳದೆ ಕೃಷಿ ಇಲಾಖೆ‌ ಮಾಹಿತಿ ಪಡೆದು ಆಧುನಿಕ ಕೃಷಿ ಪದ್ಧತಿಯತ್ತ‌ ಮುಖ ಮಾಡಬೇಕಿದೆ. ಆ ಮೂಲಕ ಉತ್ತಮ ಕೃಷಿಕರಾಗಿ ಜೀವನ ಕಟ್ಟಿಕೊಳ್ಳಬೇಕು‌’ ಎಂದು ಕನ್ನಡ ಸಾಹಿತ್ಯ‌ ಮತ್ತು ಸಾಂಸ್ಕೃತಿಕ ವೇದಿಕೆ ತಾಲ್ಲೂಕು ಘಟಕದ ಅಧ್ಯಕ್ಷ ಶಂಕರ್ ಶೇಟ್ ತಿಳಿಸಿದರು.

ADVERTISEMENT

‘ದೇಶದಲ್ಲಿ‌ ಅನ್ನ ನೀಡುವ ಶಕ್ತಿ ರೈತನಿಗಿದೆಯೇ ಹೊರತು ಇನ್ಯಾರಿಗೂ ಇಲ್ಲ.‌ ಸರ್ಕಾರ ರೈತರಿಗಾಗಿ ಹಲವು ಯೋಜನೆ ನೀಡಲು ಕ್ರಮ ಕೈಗೊಳ್ಳಬೇಕಿದೆ. ರೈತರ ಬೆಳೆಗಳು ಬೆಂಬಲ ಬೆಲೆ ಅಡಿ ಖರೀದಿಯಾಗಬೇಕು. ಪ್ರತಿ ಕ್ಷೇತ್ರಕ್ಕೆ ಸಬ್ಸಿಡಿ ನೀಡುವ ಯೋಜನೆ ಜಾರಿ ಮಾಡಬೇಕು’ ಎಂದು ಸಮಾಜ ಸೇವಕ ರಾಜು ಹಿರಿಯಾವಲಿ ತಿಳಿಸಿದರು.

ನಾಟಿ ಸಂಭ್ರಮದಲ್ಲಿ ನಿವೃತ್ತ ಶಿಕ್ಷಕ ಸಂಪತ್ ಕುಮಾರ್, ರೈತ ಶಿವಪ್ಪ, ವೇದಿಕೆ ಕಾರ್ಯದರ್ಶಿ ಮಹೇಶ್ ಖಾರ್ವಿ, ಮಧು, ರೈತ ಮಹಿಳೆಯರಾದ ಪ್ರೇಮ, ಜ್ಯೋತಿ, ಭಾಗ್ಯ, ಸವಿತಾ, ದ್ರಾಕ್ಷಾಯಿಣಿ, ರೇಣುಕಾ, ಗೀತಾ, ಲಕ್ಷ್ಮಮ್ಮ, ಪ್ರೇಮಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.