ADVERTISEMENT

ಸೊರಬ: ಸಾರ್ವಜನಿಕ ದಸರಾ ಉತ್ಸವ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2025, 6:50 IST
Last Updated 24 ಸೆಪ್ಟೆಂಬರ್ 2025, 6:50 IST
ಸೊರಬ ಪಟ್ಟಣದ ಶ್ರೀ ರಂಗನಾಥ ಸ್ವಾಮಿ ದೇವಾಲಯ ಆವರಣದಲ್ಲಿ ನಡೆದ 17ನೇ ವರ್ಷದ ಸಾರ್ವಜನಿಕ ದಸರಾ ಉತ್ಸವ ಉದ್ಘಾಟಿಸಿ ಮಾತನಾಡಿದರು
ಸೊರಬ ಪಟ್ಟಣದ ಶ್ರೀ ರಂಗನಾಥ ಸ್ವಾಮಿ ದೇವಾಲಯ ಆವರಣದಲ್ಲಿ ನಡೆದ 17ನೇ ವರ್ಷದ ಸಾರ್ವಜನಿಕ ದಸರಾ ಉತ್ಸವ ಉದ್ಘಾಟಿಸಿ ಮಾತನಾಡಿದರು   

ಸೊರಬ: ‘ಸರ್ವ ಸಮುದಾಯದವರು ಒಗ್ಗೂಡಿ ಪ್ರೀತಿ ವಿಶ್ವಾಸದಿಂದ ಆಚರಿಸುವ ಹಬ್ಬ-ಉತ್ಸವಗಳಿಗೆ ಸದಾ ಸಹಕಾರ ನೀಡುತ್ತೇನೆ’ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಹೇಳಿದರು. 

ಪಟ್ಟಣದ ರಂಗನಾಥ ಸ್ವಾಮಿ ದೇವಾಲಯ ಆವರಣದ ಸುರಭಿ ಸಾಂಸ್ಕೃತಿಕ ವೇದಿಕೆಯಲ್ಲಿ ದಸರಾ ಉತ್ಸವ ಸಮಿತಿ, ತಾಲ್ಲೂಕು ಆಡಳಿತ, ಪುರಸಭೆ ವತಿಯಿಂದ ಹಮ್ಮಿಕೊಂಡಿದ್ದ 17ನೇ ವರ್ಷದ ಸಾರ್ವಜನಿಕ ದಸರಾ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 

‘ಹಬ್ಬ- ಹರಿದಿನಗಳು ಎಲ್ಲರೂ ಒಂದುಗೂಡಿ ಮಾಡುವ ಸಂಭ್ರಮವಾಗಿದೆ. ಪಟ್ಟಣದಲ್ಲಿ ವರ್ಷದಿಂದ ವರ್ಷಕ್ಕೆ ಸಾರ್ವಜನಿಕ ದಸರಾ ಉತ್ಸವ ಅದ್ದೂರಿಯಾಗಿ ನಡೆಯುತ್ತಿರುವುದು ಸಂತಸದ ವಿಷಯವಾಗಿದೆ’ ಎಂದರು. 

ADVERTISEMENT

‘ಅತಿಯಾದ ಮಳೆಯಿಂದಾಗಿ ಗ್ರಾಮೀಣ ಭಾಗದಲ್ಲಿ ರಸ್ತೆಗಳಿಗೆ ಹಾನಿಯಾಗಿದೆ. ಮಳೆ ನಿಂತ ತರುವಾಯ ರಸ್ತೆಗಳನ್ನು ದುರಸ್ತಿಗೊಳಿಸಲಾಗುವುದು’ ಎಂದು ತಿಳಿಸಿದರು.  

ದುರ್ಗಾದೇವಿ ವಿಗ್ರಹದ ಶಿಲ್ಪಿ ಕೆ.ಎನ್. ರಾಘವೇಂದ್ರ, ಲಕ್ಷಣ ಸಾಗರ್ ನಡಹಳ್ಳಿ, ಪಾಂಡುರಂಗ ಹಾಗೂ ರಂಗನಾಥ್ ಅವರನ್ನು ಸನ್ಮಾನಿಸಲಾಯಿತು. 

ಜಡೆ ಸಂಸ್ಥಾನ ಮಠ ಹಾಗೂ ಸೊರಬ ಮುರುಘಾಮಠದ ಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ದಸರಾ ಉತ್ಸವ ಸಮಿತಿ ಅಧ್ಯಕ್ಷ ಪ್ರಶಾಂತ್ ಮೇಸ್ತ್ರಿ, ಪ್ರಧಾನ ಕಾರ್ಯದರ್ಶಿ ಪರಶುರಾಮ ಸಣ್ಣಬೈಲ್, ಆರ್ಥಿಕ ಸಮಿತಿ ಅಧ್ಯಕ್ಷ ಎಚ್. ಗಣಪತಿ, ಪುರಸಭೆ ಸದಸ್ಯ ಎಂ.ಡಿ. ಉಮೇಶ್, ಎಂ.ಡಿ. ಶೇಖರ್, ಎನ್. ಷಣ್ಮುಖಾಚಾರ್, ತಬಲಿ ಬಂಗಾರಪ್ಪ, ಕೆ.ವಿ. ಗೌಡ, ಜಯಶೀಲಗೌಡ, ಬಂದಗಿ ಬಸವರಾಜ ಶೇಟ್, ಸುಜಾತ ಜೋತಾಡಿ, ಮಹೇಶ್ ಖಾರ್ವಿ, ಜಿ. ಕೆರಿಯಪ್ಪ, ಸುರೇಶ್ ಭಂಡಾರಿ, ಕೆ.ಎಚ್. ಮಾಲತೇಶ್, ಎಸ್. ಮಂಜುನಾಥ್, ಬಸವಂತಪ್ಪ ಗುರ್ಕಿ, ಕೆ.ಪಿ. ರಾಜೇಶ್, ಪ್ರಶಾಂತ್ ಹಿರೇಶಕುನ, ಎಸ್. ರಾಘವೇಂದ್ರ, ಕುಮಾರ್ ಹಿರೇಶಕುನ ಸೇರಿದಂತೆ ಇತರರಿದ್ದರು.

ರಂಗನಾಥ ದೇವಸ್ಥಾನಕ್ಕೆ ನೂತನ ರಥ ಸಿದ್ಧಗೊಳ್ಳುತ್ತಿದೆ. ಹಲವಾರು ದಾನಿಗಳು ಇದಕ್ಕೆ ಸಹಕಾರ ನೀಡಿದ್ದಾರೆ. ಮುಂದಿನ ರಥೋತ್ಸವಕ್ಕೆ ನೂತನ ರಥ ಬಳಸಲಾಗುತ್ತದೆ

-ಮಧು ಬಂಗಾರಪ್ಪ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.