ಆನವಟ್ಟಿ: ರಾಜ್ಯ ಸರ್ಕಾರ ಕೈಗೊಂಡಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯನ್ನು ಕುಗ್ರಾಮಗಳಲ್ಲಿ ಕಡಿಮೆ ಅವಧಿಯಲ್ಲಿ ಸಮೀಕ್ಷಾ ಕಾರ್ಯವನ್ನು ಶೇ 100ರಷ್ಟು ಪೂರ್ಣಗೊಳಿಸಿರುವ ಶಿಕ್ಷಕಿ ರೂಪಾ ಹಾಗೂ ಶಿಕ್ಷಕ ಮಂಜುನಾಥ್ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಜಗಟೂರು ಸರ್ಕಾರಿ ಶಾಲೆಯ ಪದವೀಧರ ಶಿಕ್ಷಕಿ ಬಿ.ಎನ್ ರೂಪಾ ಹಾಗೂ ಹಿರೇಮಾಗಡಿ ಸರ್ಕಾರಿ ಶಾಲೆ ಶಿಕ್ಷಕ ಮಂಜುನಾಥ ದ್ಯಾಮ್ಲಾ ನಾಯ್ಕ ಲಮಾಣಿ ಅವರಿಗೆ ಜಡೆ ಪಂಚಾಯಿತಿಯ ಕುಗ್ರಾಮ ತಿಗಣಿ, ಚಗಟೂರು ಹಾಗೂ ಕಾಲ್ಗಗೇರಿಯಲ್ಲಿ ಮನೆಗಳ ಸಮೀಕ್ಷೆಯನ್ನು ಅತೀ ಕಡಿಮೆಯ ಮೂರೇ ದಿನದಲ್ಲಿ ಶೇ 100ರಷ್ಟು ಪೂರ್ಣಗೊಳಿಸಿದ್ದಾರೆ.
ಮಂಜುನಾಥ ದ್ಯಾಮ್ಲಾ ನಾಯ್ಕ ಅವರು ತಮಗೆ ನಿಗದಿಪಡಿಸಿರುವ 83 ಮನೆಗಳ ಸಮೀಕ್ಷೆ ಪೂರ್ಣಗೊಳಿಸಿ, ನಂತರ ಆಸಕ್ತಿಯಿಂದ ಹಂಚಿ ಗ್ರಾಮ ಪಂಚಾಯಿತಿಯಲ್ಲೂ ಸಮೀಕ್ಷೆದಾರರಾಗಿ ಬೆಳಿಗ್ಗೆ 6 ರಿಂದ ರಾತ್ರಿ 9 ರ ವರೆಗೆ ಕಾರ್ಯ ನಿರ್ವಹಿಸಿ ಏಳು ದಿನದಲ್ಲಿ ಜಿಲ್ಲೆಯಲ್ಲೇ ಮೊದಲಿಗರಾಗಿ ಗರಿಷ್ಠ 317 ಮನೆಗಳ ಸಮೀಕ್ಷೆ ಪೂರ್ಣಗೊಳಿಸಿ, ಇನ್ನೂ ಹೆಚ್ಚಿನ ಸಮೀಕ್ಷಾ ಕಾರ್ಯದಲ್ಲೇ ತೊಡಗಿದ್ದಾರೆ. ಇವರಿಗೆ ಮೇಲ್ವಿಚಾರಕ ಸಿಆರ್‌ಪಿ ರಾಜು ಗಂಜೇರ್ ಹಾಗೂ ನೋಡಲ್ ಅಧಿಕಾರಿ ದಯಾನಂದ ಕಲ್ಲೇರ್ ಮಾರ್ಗದರ್ಶನ ಮಾಡಿದ್ದರು.
ನಾಲ್ಕು ಹಾಗೂ ಐದು ದಿನದಲ್ಲಿ ನಿಗದಿಪಡಿಸಿರುವ ಗುರಿಯನ್ನು ಪೂರ್ಣ ಮಾಡಿರುವ ಸಮೀಕ್ಷೆದಾರ ಶಿಕ್ಷಕರಾದ ರಮೇಶ್ ದಳವಾಯಿ, ಗುರುರಾಜ ನಾಯಕ, ಪಿರಿಯಾ ನಾಯ್ಕ, ಸಿ.ಪಿ ಹರೀಶ್, ಸಿ.ನವೀನ್, ಬಿ. ನಂದಶ್ರೀ, ಎನ್. ನಂದಿನಿ, ಎಂ. ಶ್ರೀಧರ್ ಅವರಿಗೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ನೀಡಿರುವ ಪ್ರಶಂಸನಾ ಪತ್ರವನ್ನು ಈಚೆಗೆ ತಹಶೀಲ್ದಾರ್ ಮಂಜುಳಾ ಹೆಗಡಾಳ್ ಅವರು ವಿತರಿಸಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಇಒ ಶಶಿಧರ್, ಬಿಇಒ ಆರ್. ಪುಷ್ಪಾ, ಬಿಸಿಎಂ ಅಧಿಕಾರಿ ಟಿ.ಎಸ್ ಮೀನಾಕ್ಷಿ , ಇಸಿಒ ಪ್ರೇಮ್ ಕುಮಾರ್, ಸಿಆರ್‌ಪಿಗಳಾದ ರುದ್ರೇಶ್, ರಾಘವೇಂದ್ರ, ಸುಮತೇಂದ್ರ, ಬಿಆರ್‌ಪಿ ರಾಘವೇಂದ್ರ, ಮುಖ್ಯ ಶಿಕ್ಷಕ ಗಣಪತಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಮೀಕ್ಷೆದಾರರನ್ನು ಅಭಿನಂದಿಸಿದರು.
ರಾಜ್ಯ ಸರ್ಕಾರ ಕೈಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಸಮೀಕ್ಷೆಯಲ್ಲಿ ಸಮೀಕ್ಷಾದಾರರಾಗಿ ನೇಮಕಗೊಂಡ ಜಗಟೂರು ಸರ್ಕಾರಿ ಶಾಲೆಯ ಪದವೀಧರ ಶಿಕ್ಷಕಿ ಬಿ.ಎನ್ ರೂಪಾ ಹಾಗೂ ಹಿರೇಮಾಗಡಿ ಸರ್ಕಾರಿ ಶಾಲೆ ಶಿಕ್ಷಕ ಮಂಜುನಾಥ ದ್ಯಾಮ್ಲಾ ನಾಯಕ್ ಲಮಾಣಿ ಅವರಿಗೆ ಜಡೆ ಪಂಚಾಯಿತಿಯ ಕುಗ್ರಾಮ ತಿಗಣಿ ಚಗಟೂರು ಹಾಗೂ ಕಾಲ್ಗಗೇರಿಯಲ್ಲಿ ನಿಗದಿಪಡಿಸಿರುವ ಮನೆಗಳ ಸಮೀಕ್ಷೆಯನ್ನು ಅತೀ ಕಡಿಮೆಯ ಮೂರೇ ದಿನದಲ್ಲಿ ಶೇ 100ರಷ್ಟು ಪೂರ್ಣಗೊಳಿಸಿ ಅಧಿಕಾರಿಗಳ ಮೆಚ್ಚುಗೆ ಪಾತ್ರರಾದರು. ಮಂಜುನಾಥ ದ್ಯಾಮ್ಲಾ ನಾಯಕ್ ಅವರು ತಮಗೆ ನಿಗದಿಪಡಿಸುರುವ 83 ಮನೆಗಳ ಸಮೀಕ್ಷೆ ಪೂರ್ಣಗೊಳಿಸಿ ನಂತರ ಆಸಕ್ತಿಯಿಂದ ಹಂಚಿ ಗ್ರಾಮ ಪಂಚಾಯಿತಿಯಲ್ಲೂ ಸಮೀಕ್ಷೆದಾರಾಗಿ ಬೆಳ್ಳಗೆ 6 ರಿಂದ ರಾತ್ರಿ 9 ರ ವರೆಗೆ ಕಾರ್ಯ ನಿರ್ವಹಿಸಿ ಏಳು ದಿನದಲ್ಲಿ ಜಿಲ್ಲೆಯಲ್ಲೆ ಮೊದಲಿಗರಾಗಿ ಗರಿಷ್ಟ 317 ಮನೆಗಳ ಸಮೀಕ್ಷೆ ಪೂರ್ಣಗೊಳಿಸಿ ಇನ್ನೂ ಸಮೀಕ್ಷೆ ಕಾರ್ಯದಲ್ಲೆ ತೊಡಗಿದ್ದಾರೆ ಇವರಿಗೆ ಮೇಲ್ವಿಚಾರಕ ಸಿಆರ್‌ಪಿ ರಾಜು ಗಂಜೇರ್ ಹಾಗೂ ನೋಡಲ್ ಅಧಿಕಾರಿ ದಯಾನಂದ ಕಲ್ಲೇರ್ ಮಾರ್ಗದರ್ಶನ ಮಾಡಿದ್ದರು. ನಾಲ್ಕು ಹಾಗೂ ಐದು ದಿನದಲ್ಲಿ ನಿಗದಿಪಡಿಸಿರುವ ಗುರಿಯನ್ನು ಪೂರ್ಣ ಮಾಡಿರುವ ಸಮೀಕ್ಷೆದಾರರಾದ ಶಿಕ್ಷಕರಾದ ರಮೇಶ್ ದಳವಾಯಿ ಗುರುರಾಜ ನಾಯಕ ಪಿರಿಯಾ ನಾಯ್ಕ ಸಿ.ಪಿ ಹರೀಶ್ ಸಿನವೀನ್ ಬಿ. ನಂದಶ್ರೀ ಎನ್. ನಂದಿನಿ ಎಂ. ಶ್ರೀಧರ್ ಅವರಿಗೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ನೀಡಿರುವ ಪ್ರಶಂಸನಾ ಪತ್ರವನ್ನು ಈಚೆಗೆ ತಹಶೀಲ್ದಾರ್ ಮಂಜುಳಾ ಹೆಗಡಾಳ್ ಅವರು ವಿತರಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಇಒ ಶಶಿಧರ್ ಬಿಇಒ ಆರ್. ಪುಷ್ಪಾ ಬಿಸಿಎಂ ಅಧಿಕಾರಿ ಟಿ.ಎಸ್ ಮೀನಾಕ್ಷಿ ಇಸಿಒ ಪ್ರೇಮ್ ಕುಮಾರ್ ಸಿಆರ್‌ಪಿಗಳಾದ ರುದ್ರೇಶ್ ರಾಘವೇಂದ್ರ ಸುಮತೇಂದ್ರ ಬಿಆರ್‌ಪಿ ರಾಘವೇಂದ್ರ ಮುಖ್ಯ ಶಿಕ್ಷಕ ಗಣಪತಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಂಮೀಕ್ಷೆದಾರರನ್ನು ಅಭಿನಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.