ತೀರ್ಥಹಳ್ಳಿ: ಅನೇಕ ಶಾಲಾ–ಕಾಲೇಜುಗಳಲ್ಲಿ ಹಲವು ಸಮಸ್ಯೆಗಳು ಇವೆ. ವಿದ್ಯಾರ್ಥಿಗಳಿಂದ ಕೆಲವು ಸಮಸ್ಯೆ ಸೃಷ್ಟಿಯಾದರೆ, ಕೆಲವಕ್ಕೆ ಉಪನ್ಯಾಸಕರು ಕಾರಣರಾಗಿದ್ದಾರೆ. ಕೋವಿಡ್ ಕಾರಣದಿಂದ ಯಾವ ವಿದ್ಯಾರ್ಥಿಗಳೂ ಹಿಂದುಳಿಯಂತೆ ನಿಗಾವಹಿಸಬೇಕು ಎಂದು ಆರಗ ಜ್ಞಾನೇಂದ್ರ ಶಿಕ್ಷಕರಿಗೆ ಸೂಚನೆ ನೀಡಿದರು.
ಪಟ್ಟಣದ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿಸೋಮವಾರ ನಡೆದ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯದ ಶೈಕ್ಷಣಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟಗಳಾಗಿರುವ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯು ಶೈಕ್ಷಣಿಕ ಪ್ರಗತಿ ಮೇಲೆ ಕೋವಿಡ್ ಅಡ್ಡ ಪರಿಣಾಮ ಬೀರಿದೆ.ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗದರ್ಶನ ನೀಡಿ ಭವಿಷ್ಯದ ಶಿಕ್ಷಣಕ್ಕೆ ಅಡಿಪಾಯ ಹಾಕಬೇಕು. ಯಾವ ಕಾರಣಕ್ಕೂ ವಿದ್ಯಾರ್ಥಿಗಳು ಹೊರಗುಳಿಯದಂತೆ ಎಚ್ಚರಿಗೆ ವಹಿಸಬೇಕು ಎಂದು ಸೂಚಿಸಿದರು.
‘ಜಾತಿ, ಧರ್ಮ ಮೀರಿ ವಿದ್ಯಾರ್ಥಿಗಳು ಜಾತ್ಯತೀತ ಚಿಂತನೆ ಬೆಳೆಸಿಕೊಳ್ಳಬೇಕು. ಇತ್ತೀಚೆಗೆ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸಮವಸ್ತ್ರ ಸಂಹಿತೆ ಉಲ್ಲಂಘನೆ ಪ್ರಯತ್ನ ನಡೆದಿದೆ. ಅದಕ್ಕೆ ಕಾಲೇಜು ಆಡಳಿತ ಮಂಡಳಿ ಅವಕಾಶ ನೀಡಿಲ್ಲ. ಶಾಲಾ, ಕಾಲೇಜು ಆಂತರಿಕ ನಿಯಮ ಪಾಲನೆಗೆ ರಾಜಿ ಬೇಕಿಲ್ಲ’ ಎಂದುಹೇಳಿದರು.
ಸಭೆಯಲ್ಲಿ ಬಿಇಒ ಆನಂದಕುಮಾರ್, ಪ್ರಾಂಶುಪಾಲರಾದ ಸುಧಾ ದೇವರಾಜ್, ಮುಖ್ಯಶಿಕ್ಷಕ ಗಿರಿರಾಜ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.