ಶಿರಾಳಕೊಪ್ಪ: ಪ್ರಚೋದನಕಾರಿ ಭಾಷಣದ ತುಣುಕೊಂದನ್ನು ವಾಟ್ಸ್‌ಆ್ಯಪ್ ಸ್ಟೇಟಸ್‌ಗೆ ಹಾಕಿದ ಕಾರಣ ಯುವಕನೊಬ್ಬನ ಮೇಲೆ ಅನ್ಯ ಕೋಮಿನ ಯುವಕರ ಗುಂಪು ಹಲ್ಲೆ ಮಾಡಿದೆ.
ಚೈತ್ರಾ ಕುಂದಾಪುರ ಅವರ ಪ್ರಚೋದನಕಾರಿ ಭಾಷಣದ ತುಣುಕೊಂದನ್ನು ಶಿಕಾರಿಪುರ ರಸ್ತೆಯ 7 ಕ್ರೋರ್ ಬಟ್ಟೆ ಅಂಗಡಿಯ ಪ್ರಮೋದ್ ತನ್ನ ವಾಟ್ಸ್‌ಆ್ಯಪ್ ಸ್ಟೇಟಸ್‌ಗೆ ಹಾಕಿದ್ದಾರೆ ಎಂದು ಆರೋಪಿಸಿದ ಅನ್ಯ ಕೋಮಿನ ಯುವಕರ ಗುಂಪು ಅಂಗಡಿಗೆ ನುಗ್ಗಿ ಹಲ್ಲೆ ಮಾಡಿದೆ. ತಕ್ಷಣ ಪೋಲಿಸರು ಸ್ಥಳಕ್ಕೆ ಬಂದು ಪರಿಸ್ಥಿತಿ ತಿಳಿಗೊಳಿಸಿದರು. ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.