ತೀರ್ಥಹಳ್ಳಿ: ರಥಬೀದಿಯ ಮೂರು ದೇವಸ್ಥಾನಗಳಿಗೆ ತಡರಾತ್ರಿ ಕಳ್ಳನೊಬ್ಬ ನುಗ್ಗಿ ದರೋಡೆಗೆ ಯತ್ನಿಸಿದ್ದಾನೆ.
ರಾಮೇಶ್ವರ ಸಭಾಭವನದಲ್ಲಿ ಅನ್ನಸಂತರ್ಪಣೆ ಸಮಿತಿಯ ಕಾಣಿಕೆ ಹುಂಡಿಯ ಹಣ ಮತ್ತು ಅಲ್ಮೆರೆ ಒಡೆದು ಸಾರ್ವಜನಿಕರ ದೇಣಿಗೆಯಿಂದ ಸಂಗ್ರಹಿಸಿದ್ದ ₹ 16,000 ಕಳವು ಮಾಡಲಾಗಿದೆ.
ರಾಮೇಶ್ವರ ದೇವಸ್ಥಾನದ ಪಕ್ಕದಲ್ಲಿರುವ ಸಭಾಭವನಕ್ಕೆ ನುಗ್ಗಿದ ಕಳ್ಳ ಅಲ್ಲಿದ್ದ ಡಿವಿಆರ್ ಎತ್ತಿಕೊಂಡು ಹೋಗಿದ್ದಾನೆ. ನಂತರ ಸಮೀಪದ ಮಾಧವ ದೇವಸ್ಥಾನಕ್ಕೆ ನುಗ್ಗಿ ದೇವಸ್ಥಾನದ ಬಾಗಿಲ ಚಿಲಕ ಒಡೆದಿದ್ದಾನೆ. ಅನಂತರ ವೆಂಕಟರಮಣ ದೇವಸ್ಥಾನ ನುಗ್ಗುವ ಪ್ರಯತ್ನ ನಡೆಸಿದ್ದು, ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮುಖ ಕಾಣದಂತೆ ಬಟ್ಟೆ ಮುಚ್ಚಿಕೊಂಡು ಕಳ್ಳ ಪರಾರಿಯಾಗಿದ್ದಾನೆ.
ಅಂದಾಜು ₹ 1 ಲಕ್ಷಕ್ಕೂ ಹೆಚ್ಚು ನಷ್ಟವಾಗಿರುವ ಸಾಧ್ಯತೆ ಇದೆ. ತೀರ್ಥಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.